ರಾಷ್ಟ್ರೀಯ ವಿಚಾರ ಸಂಕಿರಣ

19 Dwd 3 Dr. N.M. Makandar
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಅಂಜುಮನ್ ಪದವಿ ಕಾಲೇಜಿನಲ್ಲಿ ಡಿ. 23ರಂದು `ಉದ್ಯೋಗ, ಉದ್ಯೋಗಾವಕಾಶ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣ' ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಎನ್.ಎಂ. ಮಕಾನದಾರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ ಉದ್ಘಾಟಿಸುವರು. ಐಐಟಿ ಡೀನ್ ಡಾ. ಶಿವಪ್ರಸಾದ ಮುಖ್ಯ ಭಾಷಣ ಮಾಡುವರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಡಾ. ಸಯದ್‌ಖಾದೀರ್ ಸರಗಿರೋ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.

ಬೆಳಗ್ಗೆ 11.30ರಿಂದ `ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಉತ್ಕರ್ಷ ಮತ್ತು ಉದ್ಯೋಗದಲ್ಲಿ ಕುಸಿತ' ಗೋಷ್ಠಿ, ಮಧ್ಯಾಹ್ನ 12.45ಕ್ಕೆ `ಉನ್ನತ ಶಿಕ್ಷಣದಲ್ಲಿ ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳು' ಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಜರುಗುವುದು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ ಹೊಸಮನಿ ಅತಿಥಿಯಾಗಿ ಭಾಗವಹಿಸುವರು. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರಅಹ್ಮದ್ ಜಹಗೀರದಾರ ಅಧ್ಯಕ್ಷತೆ ವಹಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net