ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

mng-aug23- fiza mall
ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದಂಗವಾಗಿ ನಡೆದ ಆಸ್ಟ್ರೋ ಕಿಡ್ಸ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು.
Published on

ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಭಾರತದ ಮೊಟ್ಟ ಮೊದಲ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನು ಶುಕ್ರವಾರ ‘ಆಸ್ಟ್ರೋ ಕಿಡ್ಸ್’ ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಇಸ್ರೋ ಉಪನಿರ್ದೇಶಕ ಸತೀಶ್ ಮಿಶ್ರ ಅವರು ಚಂದ್ರಯಾನ್-3ರ ಯಶಸ್ಸಿನ ಬಳಿಕ ಈಗ ಗಗನ್‌ಯಾನ್(ಮಾನವ ಸಹಿತ ಬಾಹ್ಯಾಕಾಶ ಯಾನ)ದತ್ತ ಇಸ್ರೋ ಸಿದ್ಧತೆ ನಡೆಸುತ್ತಿದೆ. ಬಾಹ್ಯಾಕಾಶ ವಿಜ್ಞಾನದತ್ತ ಆಸಕ್ತಿ ಇರುವ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಹೆಚ್ಚು ಶ್ರಮವಹಿಸಿ ಅಧ್ಯಯನ ಮಾಡಬೇಕು, ಅಲ್ಲದೆ ಬರಹಗಾರರಿಗೆ, ವಾಣಿಜ್ಯ, ಕಲಾ ಹಿನ್ನೆಲೆಯವರಿಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರವಾದ ಅವಕಾಶವಿದೆ, ತಮ್ಮ ಕ್ಷೇತ್ರದಲ್ಲಿ ಹೆಚ್ಚು ಆಸ್ಥೆಯಿಂದ ಅಧ್ಯಯನ ಮಾಡುವುದು ಮುಖ್ಯ ಎಂದರು.

ಫಿಜಾ ಬೈ ನೆಕ್ಸಸ್ ಮಾಲ್‌ನ ಸಹಾಯಕ ಮುಖ್ಯ ಪ್ರಬಂಧಕ ಸುನಿಲ್ ಮಾತನಾಡಿ, ಇಸ್ರೋ ಸಂಸ್ಥೆ ಗಗನಕ್ಕೆ ಕಳಿಸಿಕೊಟ್ಟ ರಾಕೆಟ್‌ಗಳನ್ನು ಮತ್ತು ಸೆಟಲೈಟ್‌ಗಳನ್ನು ಸಣ್ಣ ಮಾಡೆಲ್‌ಗಳ ರೂಪದಲ್ಲಿ ನಿರ್ಮಿಸಲಾಗಿದ್ದು ಇವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳ ಬಗ್ಗೆ ಮತ್ತು ಬಾಹ್ಯಾಕಾಶ ವೈಜ್ಞಾನಿಕ ವಿಶೇಷಗಳ ಕುರಿತಂತೆ ಮಕ್ಕಳಿಗೆ ಇಲ್ಲಿ ವಿವರಣೆಯನ್ನು ನೀಡಲಾಗುತ್ತದೆ. ಭೂಗೋಳ ಶಾಸದ ಕುರಿತಂತೆ ಮಕ್ಕಳಲ್ಲಿ ವಿಶೇಷ ಆಸಕ್ತಿ ತರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸ್ಟ್ರೊ ಕಿಡ್ಸ್ ಪ್ರದರ್ಶನ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಇರಲಿದೆ, ಮಂಗಳೂರಿನಲ್ಲಿ ಈ ಬಾಹ್ಯಾಕಾಶ ದಿನಾಚರಣೆ ಒಂದು ವಿಶೇಷವಾಗಿದ್ದು, ಮಂಗಳೂರಿನಲ್ಲಿ ನಡೆದ ಇಂದಿನ ಈ ಕಾರ್ಯಕ್ರಮ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ ಎಂದರು.

ರಾಷ್ಟ್ರೀಯ ಬಾಹ್ಯಾಕಾಶ ದಿನದಂಗವಾಗಿ ನಡೆದ ಆಸ್ಟ್ರೋ ಕಿಡ್ಸ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಕಾರ್ಯಕ್ರಮ ಸಲಹೆಗಾರ ವೇಣು ಶರ್ಮ, ಶ್ರೀನಿಧಿ ರಾವ್ ಅನಿಷಾ ಮತ್ತು ಉಲ್ಲಾಸ್, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.

---------------

ಆಸ್ಟ್ರೋ ಕಿಡ್ಸ್ ವಿಶೇಷ ಪ್ರದರ್ಶನ

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಆಸ್ಟ್ರೋ ಕಿಡ್ಸ್ ಎಂಬ ವಿಶಿಷ್ಟ ಕಾರ್ಯಕ್ರಮ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯುತ್ತಿದೆ. ಇದು ವಿಶಿಷ್ಠ ಕಾರ್ಯಕ್ರಮ. ಆಸ್ಟ್ರೋ ಕಿಡ್ಸ್ ಎಂಬ ವಿಶೇಷವಾದ ಪ್ರದರ್ಶನ ಆ.15ಕ್ಕೆ ಆರಂಭಗೊಂಡಿದ್ದು, ಆ.25ರ ವರೆಗೂ ನಡೆಯಲಿದೆ. ಪ್ರತಿ ದಿನವೂ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದ್ದು ಅವರು ಬಂದು ಭಾಗವಹಿಸುತ್ತಿದ್ದಾರೆ. ಇದುವರೆಗೆ ಸುಮಾರು 21 ಶಾಲೆಗಳಿಂದ 1200ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಅನುಭವ ನೀಡುವ ಫಿಜ್ಜಾ ಮಾಲ್ ನಲ್ಲಿ ವಿಶೇಷವಾದ ಫುಡ್ ಕೋರ್ಟ್ ಇದೆ. ಸಿನಿಮಾ ಮನರಂಜನೆ ಇದೆ. ಹೀಗಾಗಿ ಇದು ಜನಾಕರ್ಷಣೆಯ ಕೇಂದ್ರವಾಗಿದೆ ಎಂದು ನೆಕ್ಸಸ್ ಮಾಲ್ ಕೇಂದ್ರ ನಿರ್ದೇಶಕ ಅರವಿಂದ ಶ್ರೀವಾಸ್ತವ್ ತಿಳಿಸಿದರು.

-----------------

ಅಂತರರಾಷ್ಟ್ರೀಯ ಮಟ್ಟದ ಅನುಭವ ನೀಡುವ ಫಿಜ್ಜಾ ಮಾಲ್‌ನಲ್ಲಿ ವಿಶೇಷವಾದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ಆಸ್ಟ್ರೋ ಕಿಡ್ಸ್ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ ಅನುಭವ ನೀಡುತ್ತಿದೆ. ಮಂಗಳೂರಿನಲ್ಲಿ ಈ ಸ್ಪೇಸ್ ಡೇ ಸೆಲೆಬ್ರೇಶನ್ ಒಂದು ವಿಶೇಷವಾಗಿದ್ದು, ರಾಷ್ಟ್ರಾದಾದ್ಯಂತ ಈ ವರ್ಷ ಪ್ರಪ್ರಥಮ ಆಚರಣೆ ನಡೆದರೆ ಮಂಗಳೂರಿನಲ್ಲಿ ನಡೆದ ಇಂದಿನ ಈ ಕಾರ್ಯಕ್ರಮ ಕಾರ್ಯಕ್ರಮ ಪ್ರಪ್ರಥಮ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ.

ವೇಣು ಶರ್ಮ, ಕಾರ್ಯಕ್ರಮ ಸಲಹೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net