ಡಿ.6ರಂದು ನಗರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಹೇಳಿಕೆ

Press Conference on National Seminar mandya
Published on

ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.6ರಂದು ‘ಕಾವೇರಿ: ಪ್ರಕೃತಿಯ ಪ್ರಸಾದ ಮನುಷ್ಯರ ವಿವಾದ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ತಿಳಿಸಿದರು.

ಎಸ್.ಬಿ ಎಜುಕೇಷನ್ ಟ್ರಸ್ಟ್, ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಸಮಾರಂಭವನ್ನು ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಚಂದ್ರಶೇಖರ್ ಉದ್ಘಾಟಿಸುವರು. ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ರಾಜಾರಾವ್, ಮಣಿಪಾಲ ಯೂನಿರ್ವಸಿಟಿ ನಿವೃತ್ತ ಕುಲಪತಿ ಡಾ.ಚಂದ್ರಶೇಖರ್, ಕೃಷಿ ವಿವಿ ನಿವೃತ್ತ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್, ಕಾವೇರಿ ನದಿ ನೀರು ವಿವಾಹ ವಿಶ್ಲೇಷಕ ಅರ್ಜುನಹಳ್ಳಿ ಪ್ರಸನ್ನಕುಮಾರ್, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು, ತಾಂತ್ರಿಕ ನಿರ್ದೇಶಕ ಡಾ.ಪಿ.ಎಸ್.ರಾವ್, ನಿವೃತ್ತ ಮುಖ್ಯ ಇಂಜಿನಿಯರ್ ರವಿಶಂಕರ್ ದೋಂತಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಬಹಳಷ್ಟು ಲೋಪಗಳಾಗಿವೆ. ಸಾವಿರಾರು ವರ್ಷಗಳಿಂದ ವಿವಾದ ಇನ್ನೂ ಜೀವಂತವಾಗಿದೆ. ಕಾವೇರಿ ಜಲಾನಯ ಪ್ರದೇಶದಲ್ಲಿ ಯಾವ ರೀತಿ ಮಳೆ ಬೀಳುತ್ತದೆ. ಮಳೆ ಮಾರುತಗಳು ಹೇಗಿವೆ ಎಂಬುದರ ತಾಂತ್ರಿಕ ಅಧ್ಯಯನದ ಮೇಲೆ ನೀರು ಹಂಚಿಕೆ ಮಾಡಬೇಕು. ಅದು ಬಿಟ್ಟು 10 ವರ್ಷ ಸರಾಸರಿ ಮಳೆ ಬಿದ್ದಿರುವ ಪ್ರಮಾಣವನ್ನು ತೆಗೆದುಕೊಂಡು ನೀರಿ ಹಂಚಿಕೆ ಮಾಡಲಾಗಿದೆ. ಆದರೆ ಸಂಕಷ್ಟ ಸಮಯದಲ್ಲಿ ಯಾವ ರೀತಿ ಅದನ್ನು ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಯಾವುದೇ ಪ್ರಸ್ತಾವನ್ನೂ ಮಾಡಿಲ್ಲ. ಜನಸಂಖ್ಯೆ ಹೆಚ್ಚಳ, ಕೃಷಿ ಪ್ರದೇಶ ವಿಸ್ತಾರ, ಸಮರ್ಪಪಕ ನೀರು ಬಳಕೆಯಲ್ಲಿನ ವಿಫಲ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕಾವೇರಿ ನೀರಿನ ವಿವಾದ ತಲೆದೋರಿದೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಸಿ.ಜಯರಾಂ, ಮಾಂಡವ್ಯ ಎಕ್ಸಲೆನ್ಸ್ ಕಾಲೇಜಿನ ಪಾಲುದಾರ ಎಂ.ಆರ್.ಮಂಜು, ಮಾಂಡವ್ಯ ಪ್ರಥಮ ದರ್ಜೆ ಪ್ರಾಂಶುಪಾಲ ಕೆ.ಸಿ.ಭವಾನಿ ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net