ರಾಷ್ಟ್ರೀಯ ವಿಜ್ಞಾನ ದಿನಾಚರಣೆ

5 vikram 3
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ಡಾ. ಜೆ.ಆರ್​. ಟೋನಣ್ಣವರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್​. ಸಿ.ವಿ.ರಾಮನ್​ರ ಸಂಶೋಧನೆ ಮಹತ್ವ ಹಾಗೂ ಅದರ ಅನ್ವಯಗಳ ಕುರಿತು ಉಪನ್ಯಾಸ ನೀಡಿದರು.

ಡಾ. ಸಿ. ಕಷ್ಣಮೂರ್ತಿ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನ ಆಚರಿಸುವ ಉದ್ದೇಶ ಎಲ್ಲರೂ ವೈಜ್ಞಾನಿಕವಾಗಿ ಚಿಂತನೆ ನಡೆಸಿ ವಿಜ್ಞಾನದಲ್ಲಿ ಉತ್ತಮ ಸಂಶೋಧನೆಗಳು ಆಗುವುದಾಗಿದೆ. ವಿದ್ಯಾರ್ಥಿಗಳು ಈ ದಿನದ ಪ್ರೇರೇಪಣೆಯೊಂದಿಗೆ ಭವಿಷ್ಯದಲ್ಲಿ ನೋಬೆಲ್​ ಪಾರಿತೋಷಕ ತರುವಂತಾಗಲಿ ಎಂದರು.

ಡಾ. ಶ್ಯಾಮ ಮಲ್ಲನಗೌಡರ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನವನ್ನು ಕಠಿಣವೆಂದು ಭಾವಿಸುತ್ತಾರೆ. ಆದರೆ ಪ್ರಾಯೋಗಿಕವಾಗಿ ವಿಜ್ಞಾನವನ್ನು ಅಧ್ಯಯನ ಮಾಡಿದರೆ ಖಂಡಿತವಾಗಿಯೂ ವಿಜ್ಞಾನ ಅಧ್ಭುತ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ವಿಜ್ಞಾನ ದಿನದ ಈ ವರ್ಷದ ಘೋಷ ವಾಕ್ಯದಂತೆ ಯುವ ಪೀಳಿಗೆ ವೈಜ್ಞಾನಿಕತೆ ಬೆಳೆಸಿಕೊಂಡು ವಿಕಸಿತ ಭಾರತ ನಿರ್ಮಾಣ ಮಾಡುವಂತಾಗಲಿ ಎಂದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಡಿ. ಭಾವನಾ, ಮಂಜುನಾಥ ಎಸ್​. (ಪ್ರ), ಐಶ್ವರ್ಯ ಕೆ., ಮನೋಜ ಬುರ್ಲಿ (ದ್ವಿ), ಭರತಕುಮಾರ, ಸಹನಾ ತಳವಾರ (ತೃ) ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net