ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ

trafic police
Published on

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಫೆ. 7ರಂದು ಸಂಜೆ 4ಕ್ಕೆ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮ ಏರ್ಪಾಟಾಗಿದೆ. ಮೇಯರ್ ರಾಮಪ್ಪ ಬಡಿಗೇರ ಉದ್ಘಾಟಿಸುವರು. ಬ್ರಹ್ಮಕುಮಾರಿ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ.ಬಿ.ಕೆ. ಬಸವರಾಜ ರಾಜ ಋಷಿ ಸಾನ್ನಿಧ್ಯ ವಹಿಸುವರು. ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ, ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಸಿದ್ದಲಿಂಗೇಶ, ನೈಋತ್ಯ ರೈಲ್ವೆಯ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಡಾ. ಪರಂಧಾಮ, ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಜಿ. ಬಂಡಿವಡ್ಡರ್, ಉದ್ಯಮಿ ಗಿರೀಶ ಪರ್ವತಕರ, ಬಿ.ಕೆ. ನಿರ್ಮಲಾ ಇತರರು ಉಪಸ್ಥಿತರಿರುವರು. ಬಸ್ ಚಾಲಕರು, ಲೋಕೊಪೈಲೆಟ್ ಹಾಗೂ ಸಂಚಾರ ವಿಭಾಗದ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net