

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೇಜವಾಬ್ದಾರಿತನ ಮತ್ತು ಅಜಾಗರೂಕತೆ ರಸ್ತೆ ಅಪಘಾತಕ್ಕೆ ಕಾರಣ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾವಣೆಗೆ ನೀಡಬಾರದು ಎಂದು ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಮೊಹಮ್ಮದ್ ಭಾಷಾ ಹೇಳಿದರು.
ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇವೇಳೆ ರಸ್ತೆ ಸುರಕ್ಷತೆ ಕುರಿತ ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಿದರು. ಕರ್ನಾಟಕ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ರಸ್ತೆ ಸುರಕ್ಷತೆ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕೆ. ಮಾತನಾಡಿದರು.
ಆರ್‌ಟಿಒ ಕಚೇರಿಯ ಮಹೇಶ ಮಠಪತಿ, ಎಂ.ಎಫ್. ಬನಹಟ್ಟಿ, ಸಂಜೀವ ಹೊಂಡದ, ಸಚಿನ್ ಹುಲಕೋಟಿ, ವಿಜಯಲಕ್ಷ್ಮೀ ರಟಕಲ್, ಪದ್ಮಾ ಮರೆಣ್ಣವರ, ಆಶಾ ಹಜಾರೆ ಉಪಸ್ಥಿತರಿದ್ದರು.