ರಾಷ್ಟ್ರೀಯ ಓದಿನ ದಿನಾಚರಣೆ

19 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಗುರುವಾರ ರಾಷ್ಟ್ರೀಯ ಓದಿನ ದಿನ ಆಚರಿಸಲಾಯಿತು. ಶಾಲೆಯ ಗ್ರಂಥಪಾಲಕ ಶ್ರೀಕಾಂತ ಕುಂಬಾರ ಅವರು `ಓದಿನ ಬಗ್ಗೆ ಅರಿವು ಮೂಡಿಸುವಲ್ಲಿ ಪಿ.ಎನ್. ಫಣಿಕ್ಕರ್ ಅವರ ಪಾತ್ರ' ವಿಷಯ ಕುರಿತು ಮಾತನಾಡಿದರು.

ಇದೇವೇಳೆ 9ನೇ ತರಗತಿ ವಿದ್ಯಾರ್ಥಿ ಅದಮ್ಯ ದೇಶಪಾಂಡೆ ಸ್ವರಚಿತ ಕವನ ವಾಚಿಸಿದನು. ಪ್ರಾಚಾರ್ಯೆ ಡಾ. ಅನಿತಾ ರೈ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಷೇಕ ಜಗ್ಗಲ್ ನಿರೂಪಿಸಿದನು. ಶಾಲೆಯ ಆಡಳಿತಾಧಿಕಾರಿ ಡಾ. ಶ್ರೀಕಾಂತ ಕೆ., ಉಪ ಪ್ರಾಚಾರ್ಯ ಶ್ರೀಕೃಷ್ಣ ಜೋಶಿ, ಶಿಕ್ಷಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net