ಕುಪ್ಪಳಿಯಲ್ಲಿ ರಾಷ್ಟçಕವಿ ಕುವೆಂಪು 119ನೇ ಜನ್ಮದಿನೋತ್ಸವ

kuvempu1
Published on

ತೀರ್ಥಹಳ್ಳಿ: ರಾಷ್ಟçಕವಿ ಕುವೆಂಪು ಅÀವರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ವಿಶ್ವಮಾನವ ದಿನಾಚರಣೆ ಮತ್ತು ಕುವೆಂಪು ರಾಷ್ಟಿçÃಯ ಪುರಸ್ಕಾರ ಸಮಾರಂಭ ಡಿ.29ರಂದು ಕುಪ್ಪಳಿಯ ಹೇಮಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10 ಗಂಟೆಗೆ ಕವಿಶೈಲದಲ್ಲಿ ಕವಿ ನಮನ, 11 ಗಂಟೆಗೆ ಹೇಮಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಖ್ಯಾತ ಬಂಗಾಳಿ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ 2023ರ ಕುವೆಂಪು ರಾಷ್ಟಿçÃಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರ ವಹಿಸಲಿದ್ದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಪ್ರದಾನ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಮತ್ತು ಡಾ. ಜಿ.ಕೆ.ವೆಂಕಟೇಶ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಶಾರದಾ ಪರ‍್ಯಾನಾಯ್ಕ್, ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಎಸ್.ರುದ್ರೇಗೌಡ, ಭಾರತಿಶೆಟ್ಟಿ, ಡಿ.ಎಸ್.ಅರುಣ್ ಮತ್ತು ದೇವಂಗಿ, ಗ್ರಾಪಂ ಅಧ್ಯಕ್ಷೆ ಗಿರಿಜಾ ಕುಮಾರ್, ಸದಸ್ಯರಾದ ಎಚ್.ಸಿ.ಸರೋಜಾ, ಟಿ.ಎಸ್.ನಾಗರಾಜ್ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಕುವೆಂಪು ರಂಗಮAದಿರದಲ್ಲಿ ಸಂಜೆ ೭ಗಂಟೆಗೆ ನಮ್ ಟೀಮ್ ಶಿವಮೊಗ್ಗ ಅಭಿನಯದ ಕುವೆಂಪು ರಚನೆಯ ವಾಲ್ಮೀಕಿಯ ಭಾಗ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಪುಸ್ತಕ ಬಿಡುಗಡೆ
1922ರಲ್ಲಿ ಬಿಡುಗಡೆಯಾದ ಕುವೆಂಪು ಅವರ ಮೊದಲ ಪುಸ್ತಕ ಬಿಗಿರ‍್ಸ್ ಮ್ಯೂಸ್ ಕೃತಿಗೆ ನೂರು ವರ್ಷ ಸಂದಿರುವ ನೆನಪಿನಲ್ಲಿ ಕವಿಯ ಎರಡು ಇಂಗ್ಲಿಷ್ ಕವನ ಸಂಕಲನಗಳನ್ನು ಸೇರಿಸಿ ಪ್ರಕಟಿಸಲಾಗಿರುವ ಬಿಗಿರ‍್ಸ್ ಮ್ಯೂಸ್ ಅಚಿಡ್ ಅಲೈನ್ ಹಾರ್ಪ್ ಕೃತಿ ಮತ್ತು ಕುವೆಂಪು ಪ್ರಶಸ್ತಿ ಪುರಸ್ಕೃತ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರ ಬಂಗಾಳಿ ಕಥೆಗಳಿಂದ ಆಯ್ದು ನಾಗ ಎಚ್.ಹುಬ್ಬಿ ಕನ್ನಡಕ್ಕೆ ಅನುವಾದಿಸಿರುವ ಸಾಮೀಪ್ಯ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net