

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್ಡಿಎಂ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸಾ ವಿಭಾಗದಲ್ಲಿ ರಾಷ್ಟ್ರೀಯ ಮಕ್ಕಳ ದಂತ ಚಿಕಿತ್ಸಕರ ದಿನವನ್ನು ಆಚರಿಸಲಾಯಿತು.
ಎಸ್ಡಿಎಂ ವೈದ್ಯಕಿಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಲಕರ್ಣಿ ಮಾತನಾಡಿ, ಬಾಯಿಯ ಆರೋಗ್ಯವು ಮಾನವನ ಯೋಗ ಕ್ಷೇಮಕ್ಕೆ ಕನ್ನಡಿಯಾಗಿದೆ. ಚಿಕ್ಕ ಮಕ್ಕಳ ಬಾಯಿಯ ಆರೋಗ್ಯವನ್ನು ಆರಂಭದಲ್ಲೇ ಕಾಪಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಲರಾಮ ನಾಯ್ಕ ಅವರು ಆರೋಗ್ಯಕರ ಜೀವನ ನಡೆಸಲು ಬಾಯಿಯ ನೈರ್ಮಲ್ಯ ಅಭ್ಯಾಸಗಳ ಕುರಿತು ಮಾಹಿತಿ ನೀಡಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಶುವಿನ ಬಾಯಿಯ ಆರೋಗ್ಯ ಮತ್ತು ಬಾಯಿಯ ನೈರ್ಮಲ್ಯ ವೀಡಿಯೊವನ್ನು ಕ್ಯೂ ಆರ್ ಕೋಡ್ ಮೂಲಕ ಅನಾವರಣಗೊಳಿಸಲಾಯಿತು. ಉಪ ಪ್ರಾಂಶುಪಾಲೆ ಡಾ. ಲೇಖಾ ಕೆ., ಸಿಬ್ಬಂದಿ, ಇತರರು ಇದ್ದರು.
ಡಾ. ಆನಂದ ತಾವರಗೇರಿ ಸ್ವಾಗತಿಸಿದರು. ಡಾ. ವಿಜಯ ತ್ರಾಸದ ವಂದಿಸಿದರು.