ಆರೋಗ್ಯ ಹೊಂದಲು ಕ್ರೀಡೆ ಅವಶ್ಯ

national paramedical collage koppal sports
ಕೊಪ್ಪಳದಲ್ಲಿ ನ್ಯಾಷನಲ್​ ಕಾಲೇಜಿನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಾಂಗ್ರೆಸ್​ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರು ಚಾಲನೆ ನೀಡಿದರು. ಬಿಜೆಪಿ ನಾಯಕಿ ಕೀರ್ತಿ ಪಾಟೀಲ್​, ಪ್ರಾಚಾಯೆರ್ ಗೀತಾಂಜಲಿ ಬಳ್ಳೊಳ್ಳಿ, ಸಿಬ್ಬಂದಿ ಇದ್ದರು.
Published on

ಕೊಪ್ಪಳ: ಉತ್ತಮ ಆರೋಗ್ಯ ಹೊಂದಲು ಕ್ರೀಡೆಯಲ್ಲಿ ತೊಡಗಬೇಕೆಂದು ಕಾಂಗ್ರೆಸ್​ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರು ಹೇಳಿದರು.

ನಗರದ ಕಿಮ್ಸ್​ ಕಾಲೇಜು ಕ್ರೀಡಾಂಗಣದಲ್ಲಿ ನ್ಯಾಷನಲ್​ ಪ್ಯಾರಾ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಎಲ್ಲರೂ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಇಂದು ಉತ್ತಮ ಆರೋಗ್ಯ ಹೊಂದುವ ಅವಶ್ಯವಿದೆ. ಪಾಠದ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ಎಂದರು.

ಬಿಜೆಪಿ ನಾಯಕಿ ಕೀರ್ತಿ ಪಾಟೀಲ್​ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿದರೆ ಏಕಾಗ್ರತೆ ಹೆಚ್ಚುತ್ತದೆ. ಪಠ್ಯೇತರ ಚಟುವಟಿಕೆಗಳು ಕೂಡಾ ಮುಖ್ಯ. ದುಶ್ಚಟಗಳಿಂದ ದೂರವಿರಬೇಕು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿತ್ಯ ಕ್ರೀಡೆಯಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.

ಕಾಲೇಜು ಪ್ರಾಚಾಯೆರ್ ಗೀತಾಂಜಲಿ ಬಳ್ಳೊಳ್ಳಿ ಮಾತನಾಡಿ,ಮೂರು ದಿನ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ನಮ್ಮಂಥ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಷ್ಟಾಗಿ ಆದ್ಯತೆ ಇರುವುದಿಲ್ಲ. ಆದರೆ, ನಾವು ಆರೋಗ್ಯವಾಗಿದ್ದರೆ ಇತರರ ಆರೋಗ್ಯ ಕಾಪಾಡಬಹುದು. ಈ ನಿಟ್ಟಿನಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಉಪನ್ಯಾಸಕರು, ಸಿಬ್ಬಂದಿ ಇದ್ದರು. ಮೊದಲ ದಿನ ಪುರುಷರ ಕ್ರಿಕೆಟ್​ ಪಂದ್ಯಾವಳಿ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net