

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಆಶ್ರಯದಲ್ಲಿ ಪಂ. ವಸಂತ ಕನಕಾಪುರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ ನ. 9, 10ರಂದು ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ರಾಷ್ಟ್ರೀಯ ಸಂಗೀತೋತ್ಸವ ಏರ್ಪಡಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 9ರಂದು ಬೆಳಗ್ಗೆ 9.30ಕ್ಕೆ ಕವಿವಿ ಕುಲಪತಿ ಡಾ. ಬಿ.ಎಂ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಶಶಿಧರ ನರೇಂದ್ರ, ಡಾ. ಮೃತ್ಯುಂಜಯ ಅಗಡಿ ಆಗಮಿಸುವರು. ಬನುತಾಯಿ ಕನಕಾಪುರ, ಮೋಹನ ಬೆಂಡಿಗೇರಿ ಉಪಸ್ಥಿತರಿರುವರು. ತಬಲಾ ಕಲಾವಿದ ಸುರೇಶ ನಿಡಗುಂಡಿ ಹಾಗೂ ಹಾಮೋರ್ನಿಯಂ ಕಲಾವಿದ ಬಸವರಾಜ ಹಿರೇಮಠ ಅವರಿಗೆ ಸನ್ಮಾನಿಸಲಾಗುವುದು ಎಂದರು.
ನಂತರದಲ್ಲಿ ಡಾ. ಅಶೋಕ ಹುಗ್ಗಣ್ಣವರ, ಡಾ. ಮೃತ್ಯುಂಜಯ ಅಗಡಿ, ಭಾರ್ಗವಿ ಕುಲಕರ್ಣಿ, ಡಾ. ಅಯ್ಯಪ್ಪಯ್ಯ ಹಲಗಲಿಮಠ, ಡಾ. ಶ್ವೇತಾ ಮಡಪಾಡಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ನಿಖಿಲ ಜೋಶಿ ಅವರಿಂದ ಸಿತಾರ ವಾದನ, ಡಾ. ಗುರುಬಸವ ಮಹಾಮನೆ, ಸುರೇಶ ಮಂಗಳೂರು ಅವರಿಂದ ದ್ವಂದ್ವ ವಯೋಲಿನ, ಶ್ರೀಧರ ಭಜಂತ್ರಿ ಶಹನಾಯಿ ಹಾಗೂ ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಲಿದ್ದಾರೆ. ಸಹ ಕಲಾವಿದರಾಗಿ ಪಂ.ಅಲ್ಲಮಪ್ರಭು ಕಡಕೋಳ, ವಾದಿರಾಜ ದಂಡಾಪುರ, ಶ್ರೀಧರ ಮಾಂಡ್ರೆ, ಡಾ. ಗೋಪಿಕೃಷ್ಣ ಕೆ.ಜಿ, ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ಮಳೆಮಲ್ಲೇಶ ಹೂಗಾರ ಪಾಲ್ಗೊಳ್ಳುವರು. ನಂತರ ಡಾ.ಶಶಿಧರ ನರೇಂದ್ರ ರಚನೆ, ನಿರ್ದೇಶನದ ವಸಂತ ರಾಗ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ ಎಂದರು.
ನ. 10ರಂದು ಸಂಜೆ 5.30ಕ್ಕೆ ನೃತ್ಯೋತ್ಸವ ನಡೆಯಲಿದ್ದು, ವಿದುಷಿ ರೋಹಿಣಿ ಇಮಾರತಿ ಅವರ ಗಣೇಶ ನೃತ್ಯ ಶಾಲೆ, ಉಪಾಧ್ಯೆ ನೃತ್ಯ ವಿಹಾರದ ವಿದುಷಿ ಪ್ರಮೋದಾ ಉಪಾಧ್ಯೆ ಮತ್ತು ತಂಡ, ಭರತ ನೃತ್ಯ ಅಕಾಡೆಮಿಯ ವಿದ್ವಾನ ರಾಜೇಂದ್ರ ಟೊಣಪಿ ಮತ್ತು ತಂಡ, ಹುಬ್ಬಳ್ಳಿಯ ವಿದುಷಿ ಡಾ. ಸೀಮಾ ಉಪಾಧ್ಯಾಯ ಮತ್ತು ತಂಡ ಹಾಗೂ ಕಲಾರ್ಪಣ ಟ್ರಸ್ಟ್ನ ವಿದುಷಿ ಸವಿತಾ ಹೆಗಡೆ ಮತ್ತು ತಂಡಗಳು ನೃತ್ಯ ಪ್ರದರ್ಶಿಸಲಿವೆ ಎಂದರು.
ಸಂಯೋಜಕ ಪ್ರಕಾಶ ಬಾಳಿಕಾಯಿ, ಸಂಚಾಲಕಿ ವಿದುಷಿ ಸುಜಾತಾ ಗುರವ, ಡಾ. ಎ.ಎಲ್. ದೇಸಾಯಿ, ಇತರರು ಇದ್ದರು.