ಮಂಡ್ಯ ವಿವಿಗೆ ರಾಷ್ಟ್ರೀಯ ಸದಸ್ಯತ್ವ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದಿಂದ ಘೋಷಣೆ

National membership for Mandya University Mandya
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸದಸ್ಯತ್ವ ಪಡೆಯುವ ಮೂಲಕ ಮೈಲಿಗಲ್ಲು ಸೃಷ್ಟಿಸಿದೆ. ಮಂಡ್ಯ ವಿವಿ ಕುಲಪತಿ ಪ್ರೊ.ಶಿವಚಿತ್ತಪ್ಪ ಅವರಿಗೆ ಅ.1ರಂದು ಪತ್ರ ಬರೆದಿರುವ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್ ರಾಷ್ಟ್ರೀಯ ಸದಸ್ಯತ್ವ ನೀಡಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸದಸ್ಯತ್ವಕ್ಕೆ ಮಂಡ್ಯ ವಿವಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗಿದೆ. ಅದರಂತೆ 2025 ಏ.1ರಿಂದ ಜಾರಿಗೆ ಬರುವಂತೆ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. 2009 ನ.14ರಂದು ನಡೆದಿದ್ದ ಸಂಘದ 84ನೇ ವಾರ್ಷಿಕ ಸಭೆ(ವ್ಯವಹಾರ ಅಧಿವೇಶನ)ಯ ಅನುಮೋದಿಸಿದ ಷರತ್ತಿಗೆ ತಕ್ಕಂತೆ ಸದಸ್ಯತ್ವವನ್ನು ನೀಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Mla Ravikumar Ganiga

ಭಾರತೀಯ ವಿಶ್ವವಿದ್ಯಾಲಯಗಳ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಲಿದೆ. ಮಂಡ್ಯ ವಿವಿ ಬಾಗಿಲು ಮುಚ್ಚಿತೆಂದು ಟೀಕಿಸಿದವರು ಇಂದಿನ ಸಾಧನೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಮಂಡ್ಯ ವಿಶ್ವವಿದ್ಯಾನಿಲಯವನ್ನು ಇಡೀ ರಾಜ್ಯಕ್ಕೆ ಮಾದರಿ ವಿವಿಯನ್ನಾಗಿ ಮಾಡುವುದು ನನ್ನ ಕನಸು. ರವಿಕುಮಾರ್ ಗಣಿಗ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net