

ಚಿತ್ರದುರ್ಗ: ಫೆ. 8 ರಂದು ಜಿಲ್ಲೆಯ ನ್ಯಾಯಲಯಗಳಲ್ಲಿ ಆಯೋಜಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೪೦೦೦ ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶಎಸ್.ವೈ.ವಟವಟಿ ಹೇಳಿದರು.
ಅದಾಲತ್‌ಗೆ ೫೪೫೮ ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ. ಅದರಲ್ಲಿ ೪೦೦೦ ರಿಂದ ೪೫೦೦ ಪ್ರಕರಣಗಳನ್ನು ಇತ್ಯರ್ಥದ ಗುರಿ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅದಾಲತ್ ನಲ್ಲಿರಾಜೀ ಮೂಲಕ ಪರಿಹಾರ ಪಡೆದುಕೊಳ್ಳಬಹುದೆಂದರು.
ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ-೮, ಏಪ್ರಿಲ್-೧೧, ಜುಲೈ-೧೧, ಸೆಪ್ಟೆಂಬರ್-೧೨ ಹಾಗೂ ಡಿಸೆಂಬರ್- ೧೨ ಸೇರಿದಂತೆ ಐದು ಅದಾಲತ್‌ಗಳನ್ನು ಆಯೋಜಿಸಲಾಗಿದೆ.
ನ್ಯಾಯಾಲಯದಲ್ಲಿ ಬಾಕಿ ಇದ್ದ ೨೮೪೬೫ ಪ್ರಕರಣಗಳಲ್ಲಿ ೫೪೫೮ ಪ್ರಕರಣ ಹಾಗೂ ೪೩೩ ವ್ಯಾಜ್ಯಪೂರ್ವ ಪ್ರಕರಣ ಸೇರಿದಂತೆ ಒಟ್ಟು ೫೮೯೧ ಪ್ರಕರಣಗಳನ್ನು ರ್‍ಟ್ರಾಯ ಲೋಕ ಅದಾಲತ್‌ಗೆ ಗುರುತಿಸಲಾಗಿದೆ.
೨೦೧೯ ರ ಸಾಲಿನಲ್ಲಿ ಅದಾಲತ್‌ನಲ್ಲಿ ೧೦,೨೭೦ ಪ್ರಕರಣ ಹಾಗೂ ೬೮೩ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಜಿಲ್ಲೆಯು ರಾಜ್ಯದಲ್ಲಿ ೨ನೇ ಸ್ಥಾನ ಅಲಂಕರಿಸಿದೆ.
ಈ ಬಾರಿ ಮರಳು ಸಾಗಾಣಿಕೆಗೆ ಸಂಬಂಧಿಸಿದ ೨೫೦ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗಿದೆ.
ಅಕ್ರಮವಾಗಿ ಮರಳು ಸಾಗಣೆ ಮಾಡಿದ ಪ್ರಕರಣಗಳನ್ನು ಈ ಬಾರಿ ಅದಾಲತ್ನಲ್ಲಿ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
ರಾಜಿಯಾಗಬಲ್ಲ ಅಪರಾಧಿ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣ, ಮೋಟರ್ ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳಲ್ಲಿ ಬಾಕಿ ಇರುವ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಗಳು, ಮೈನ್‌ಟೆನೆನ್ಸ್ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಡಿಕೊಳ್ಳಬಹುದು.
ಕಳೆದ ಎರಡು ಮೂರು ವರ್ಷಗಳಲ್ಲಿ ಲೋಕ ಅದಾಲತ್ ಹೆಚ್ಚು ಜನಪ್ರಿಯವಾಗುತ್ತಿದ್ದು, ಇದು ಜನತಾ ನ್ಯಾಯಾಲಯಗಳು ಇತ್ಯರ್ಥಗೊಳಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
78 ಕೋಟಿ ರೂ.ವೆಚ್ಚ.
ನಗರದಲ್ಲಿ ೭೮ ಕೋಟೊ ರೂ.ವೆಚ್ಚದಲ್ಲಿ ಎರಡು ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಹೈಕೋರ್ಟ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಶಿವಣ್ಣ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್ ಕುಮಾರ್, ಕೋರ್ಟ್ ವ್ಯವಸ್ಥಾಪಕ ದೋನಿ ಇದ್ದರು.