ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್​

18Kgfph-2
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕೆಜಿಎಫ್: ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಿದ್ದು, ಚೆಕ್​ ಬೌನ್ಸ್​, ಕುಟುಂಬ ವ್ಯಾಜ್ಯ ಸೇರಿ ವಿವಿಧ ಪ್ರಕರಣಗಳನ್ನು ಅದಾಲತ್​ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿರುವುದರಿಂದ ವಕೀಲರು, ಕದಾರರು ಸಹಕರಿಸಬೇಕು ಎಂದು 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಶಿವಕುಮಾರ್​ ತಿಳಿಸಿದರು.

ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ಕುಸುಮ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್​ನಲ್ಲಿ ಕೇಸ್​ ಮುಂದುವರಿಸಿದರೆ ಸಮಸ್ಯೆ ಬಗೆಹರಿಸಲು ವರ್ಷಗಳೇ ಕಳೆದು ಹೋಗಲಿದೆ. ಆದ್ದರಿಂದ ಚೆಕ್​ಬೌನ್ಸ್​ ಕೇಸ್​ಗಳಲ್ಲಿ ಹಣ ನೀಡಿದವರಿಗೂ ಹಣ ಪಡೆದವರ ಮಧ್ಯೆ ವಿಚಾರಗಳು ತಿಳಿದಿರುತ್ತದೆ, ಆದ್ದರಿಂದ ವಿನಾಕಾರಣವಾಗಿ ನ್ಯಾಯಾಲಯಗಳಲ್ಲಿ ಪ್ರಕರಣ ಮುಂದುವರಿಸುವುದು ಬಿಟ್ಟು ಪ್ರಕರಣ ಇತ್ಯರ್ಥಕ್ಕೆ ಮುಂದಾಗಬೇಕು. ಲೋಕ ಅದಾಲತ್​ನಲ್ಲಿ ಜಿಲ್ಲೆಯಲ್ಲೇ ಕೆಜಿಎಫ್​ ನ್ಯಾಯಾಲಯ ಪ್ರಥಮ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ವಕೀಲರು ಕದಾರರು ಸಹಕರಿಸಬೇಕು ಎಂದರು.

ನ್ಯಾಯಾಧೀಶೆ ಜಯಲಕ್ಷಿ$್ಮ ಮಾತನಾಡಿ, ವಕೀಲರು ಹಾಗೂ ಕದಾರರು ಪ್ರಥಮವಾಗಿ ಲೋಕ ಅದಾಲತ್​ನ ಮಹತ್ವ ಅರಿತುಕೊಳ್ಳಬೇಕು. ಅದಾಲತ್​ನ ಉಪಯೋಗ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ವಕೀಲರ ಸಂದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ವಕೀಲರು ಲೋಕಾ ಅದಾಲತ್​ ಯಶಸ್ವಿಗೊಳಿಸಲು ಸಿದ್ಧರಿದ್ದು, ಕೆಜಿಎಫ್​ನಲ್ಲಿ ಬಹುತೇಕ ಬಡವರಿದ್ದು, ಚೆಕ್​ಬೌನ್ಸ್​ ಕೇಸ್​ಗಳಲ್ಲಿ ಪಾರ್ಟಿ ಹಣ ಪಾವತಿ ನೀಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net