ಮೈಸೂರಿನಲ್ಲಿ ರಾಷ್ಟ್ರಮಟ್ಟದ ಕುಸ್ತಿ : ಮಹಾರಾಷ್ಟ್ರದ ಪೈಲ್ವಾನ್ ವಿಶಾಲ್ ಸೇಗಲೇಗೆ ಒಲಿದ ಗೆಲುವು

National level wrestling in Mysore Maharashtra wrestler Vishal Segale wins
Published on

ಮೈಸೂರು: ನಗರದ ದೊಡ್ಡಕೆರೆ ಮೈದಾನದ ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬೆಂಗಳೂರಿನ ಪ್ರಕೃತಿ ಫೌಂಡೇಶನ್ ವತಿಯಿಂದ ಭಾನುವಾರ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುಸ್ತಿ ಪಂದ್ಯದಲ್ಲಿ ಮಹಾರಾಷ್ಟ್ರದ ಪುಣೆಯ ಪೈಲ್ವಾನ್ ವಿಶಾಲ್ ಸೇಗಲೇ ಬೆಳಗಾವಿಯ ಪೈಲ್ವಾನ್ ಸಂಜು ಅವರನ್ನು ಮಣಿಸಿದರು.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ ಮಾತನಾಡಿ, ಮೈಸೂರು ಮಹಾರಾಜರು ಕುಸ್ತಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದ್ದರು. ಮಹಾರಾಜರ ಪ್ರೋತ್ಸಾಹದಿಂದ ಕುಸ್ತಿ ಕ್ರೀಡೆಯ ಮೂಲಕ ನಮ್ಮ ರಾಜ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ ಎಂದು ಹೇಳಿದರು.

ಮೈಸೂರು ದಸರಾ ಸಂದರ್ಭ ಆಯೋಜಿಸ್ವು ಕುಸ್ತಿ ಪಂದ್ಯ ಎಲ್ಲ ಗಮನ ಸೆಳೆಯುತ್ತದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಬೆಳ್ಳಿ ಗದೆ ಮುಂತಾದ ಬಹುಮಾನಗಳನ್ನು ನೀಡುತ್ತಾ ಬಂದಿರುವುದು ಹೆಮ್ಮೆಯ ವಿಚಾರ. ಅರಮನೆ ಅವರಣದಲ್ಲಿ ದಸರಾ ಸಂದರ್ಭ ನಡೆಸುವ ವಿಜ್ರಮುಷ್ಠಿ ಕಾಳಗ ವಿಶ್ವವಿಖ್ಯಾತಿ ಹೊಂದಿದೆ. ರಾಜ್ಯ ಸರ್ಕಾರ ಸಹ ಕುಸ್ತಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ ಎಂದು ಹೇಳಿದರು.

ಪ್ರಸ್ತುತ ಈ ರಾಷ್ಟ್ರೀಯ ಕುಸ್ತಿ ಕ್ರೀಡಾ ಸ್ಪರ್ಧೆಯು ಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದು ಬೇರೆ ಬೇರೆ ದೇಶಗಳಲ್ಲಿ ಈ ಕುಸ್ತಿ ಕ್ರೀಡೆಗಳು ಆಯೋಜನೆಗೊಂಡು ನಮ್ಮ ರಾಜ್ಯಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸುವಲ್ಲಿ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿರುವುದು ಇಂದಿನ ಅವಶ್ಯಕತೆ ಇದೆ. ಈ ಕುಸ್ತಿ ಕ್ರೀಡೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಕುಸ್ತಿ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ರಾಜ್ಯಕ್ಕೆ ಮಹತ್ವದ ಕ್ರೀಡಾಪಟುವಾಗಿ ಪರಿಣಮಿಸಿದೆ. ಮಹಾನ್ ಚಾರಿತ್ರವುಳ್ಳ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕುಸ್ತಿ ಕ್ರೀಡಾಪಟುಗಳಿಗೆ ಅವರು ಅಭಿನಂದಿಸಿ, ಕುಸ್ತಿ ಕ್ರೀಡೆಯ ಕ್ರೀಡಾಪಟುಗಳು ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾಮನೋಭಾವವನ್ನು ಪ್ರದರ್ಶಿಸಲಿ ಎಂದು ಹಾರೈಸಿ ರಾಷ್ಟ್ರೀಯ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

ನೆಲಮಂಗಲದ ಶಿವಾನಂದ ಆಶ್ರಮದ ಶ್ರೀ ರಮಾಣನಂದ ಸ್ವಾಮೀಜಿ, ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳಾದ ಲೋಕೇಶ್ ಗೌಡ, ಶಿರ್ಲಿನ್ ರೆಜಿನಾಲ್ಡ್, ಧನುಷ್, ಕಿರಣ್ ಕುಮಾರ್, ವೈಭವ ನೇತ್ರಾಲಯದ ಸಂಸ್ಥಾಪಕ ಬಿಟ್ಟೇಗೌಡ, ದಾಸನಪುರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತ ಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net