

ಮೈಸೂರು: ನಗರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ಯ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ಮತ್ತು ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ (ಐಜಿಎಸ್) ಸಹಯೋಗದಲ್ಲಿ ರೀಸೆಂಟ್ ಅಡ್ವಾನ್ಸಸ್ ಇನ್ ಜಿಯೋಟೆಕ್ನಿಕ್ಸೃ್ ಫಾರ್ ಇನ್‌ಫ್ರಾಸ್ಟ್ರಕ್ಚರ್ (ಆರ್‌ಎಜಿಐ - 2024) ಕುರಿತು ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಿವಿಲ್ ಇಂಜಿನಿಯರ್‌ಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಇಂದೋರ್‌ನ ಐಐಟಿ ಪ್ರಾಧ್ಯಾಪಕ ಪ್ರೊ. ನೀಲಿಮಾ ಸತ್ಯನ್ ಅವರು, ಭಾರತದ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಅಧ್ಯಯನ, ಪುಣೆ ವಿಭಾಗದ ಸಲಹೆಗಾರರಾದ ಅನ್ನಪೂರ್ಣಿ ಅಯ್ಯರ್ ಅವರು ಡೀಲಿಂಗ್ ವಿತ್ ಲ್ಯಾಂಡ್‌ಸ್ಲೈಡ್ಸ್, ಪ್ರಾಧ್ಯಾಪಕ ಡಾ.ಪಿ.ಎಸ್.ಆರ್. ನರಸಿಂಹರಾಜು ಅವರು ದಟ್ಟವಾದ ಮಣ್ಣಿನಲ್ಲಿನ ಶಕ್ತಿ ಮತ್ತು ಅಡಿಪಾಯಗಳ ಮೌಲ್ಯಮಾಪನ ಮತ್ತು ಐಜಿಎಸ್ ಮೈಸೂರು ಅಧ್ಯಾಯದ ಅಧ್ಯಕ್ಷ ಡಾ. ಎಸ್.ಕೆ.ಪ್ರಸಾದ್ ಅವರು ಕಪ್ಪು ಹತ್ತಿ ಮಣ್ಣಿನಲ್ಲಿ ಅಡಿಪಾಯ ಚಿಕಿತ್ಸೆಗಾಗಿ ಸವಾಲುಗಳು ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಎಂಐಟಿ ಮೈಸೂರು ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸಿ.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಉದ್ಘಾಟನೆಯನ್ನು ಎಂಐಟಿಎಂ, ಎಸ್‌ಜೆಸಿಇ, ವಿವಿಸಿಇ, ಎಟಿಎಂಇಸಿಇ ಕಾಲೇಜುಗಳ ಪ್ರಾಂಶುಪಾಲ ಡಾ.ಬಿ.ಜಿ.ನರೇಶ್‌ಕುಮಾರ್ ನೆರವೇರಿಸಿದರು. ಮಹಾರಾಜ ಎಜುಕೇಶನ್ ಟ್ರಸ್ಟ್‌ನ ಪದಾಧಿಕಾರಿಗಳಾದ ಡಾ.ಎಸ್.ಮುರಳಿ, ಡಾ.ಟಿ.ವಾಸುದೇವ್, ಎಂಐಟಿ ಆಡಳಿತಾಧಿಕಾರಿ ಎ.ಎಂ. ಅನಿರುದ್ಧ, ರಾಗಿ-2024 ಕಾರ್ಯಾಗಾರದ ಕಾರ್ಯದರ್ಶಿಗಳಾದ ಡಾ.ಎನ್.ಪುನೀತ್, ಎಸ್.ವರುಣ್, ಪ್ರಾಧ್ಯಾಪಕರಾದ ಡಾ.ಎಂ.ಸಿ.ನಟರಾಜು, ಸದಾಶಿವೇಗೌಡ, ಡಾ.ಎ.ಕೆ.ಮೂರ್ತಿ, ಡಾ. ಎಸ್.ಕೆ.ಪ್ರಸಾದ್, ಡಾ. ಎಸ್. ರವಿರಾಜ್, ಡಾ. ಜಿ.ಪಿ.ಚಂದ್ರಾಧರ ಮತ್ತಿತರರಿದ್ದರು.