

ಅಂಕೋಲಾ: ತಾಲೂಕಿನ ಅಗ್ರಗೋಣದ ಶಾಂತಿಕಾ ಪರಮೇಶ್ವರಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಮಾ.1 ಮತ್ತು 2 ರಂದು ಅಗ್ರಗೋಣದ ಶ್ರೀ ಶಾಂತಿಕಾ ಪರಮೇಶ್ವರಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಜಿ.ಪಿ. ನಾಯಕ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಇಂಡಿಯನ್ ಬ್ಯಾಂಕ್, ಇಂಡಿಯನ್ ಆರ್ವಿು, ರೈಲ್ವೇಸ್, ಐ.ಒಬಿ, ತಮಿಳುನಾಡು ಮತ್ತು ಕೇರಳ ಹೀಗೆ ಆರು ತಂಡಗಳು ಪಾಲ್ಗೊಳ್ಳಲಿದ್ದು, ಸೂಪರ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.
ಅಗ್ರಗೋಣ ಮೂಲದವರೇ ಆಗಿರುವ ಸಹಕಾರಿ ಧುರೀಣ ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ಮಯೂರ ನಾಯಕ ಅವರ ಸಹಕಾರದಲ್ಲಿ ಅತ್ಯುತ್ತಮ ಕ್ರೀಡಾಂಗಣ ಮತ್ತು ವೇದಿಕೆ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಯಮಿ ಸುರೇಶ ನಾಯಕ ಅಲಗೇರಿ, ಸಹಕಾರಿ ಕ್ಷೇತ್ರದ ವಸಂತ ನಾಯಕ ಜಮಗೋಡ, ರಾಘವೇಂದ್ರ ನಾಯಕ ದೇವರಬಾವಿ, ಮಂಜೇಶ್ವರ ನಾಯಕ, ಗೆಳೆಯರ ಬಳಗ ಹೀರೆಗುತ್ತಿ, ಶಾಂತಿಕಾ ಪರಮೇಶ್ವರಿ ಸ್ಪೋರ್ಟ್ಸ್ ಕ್ಲಬ್ ಅಗ್ರಗೋಣ ಅವರ ಮಾಲಿಕತ್ವದಲ್ಲಿ ಆರು ತಂಡಗಳು ಪಾಲ್ಗೊಳ್ಳಲಿದ್ದು, ಆಟಗಾರರಿಗೆ ಪ್ರತಿಯೊಂದು ಸೌಲಭ್ಯಗಳನ್ನು ನೀಡಲಾಗುತ್ತಿದೆ ಮತ್ತು ಪಾರದರ್ಶಕವಾಗಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಮಂಜೇಶ್ವರ ನಾಯಕ, ಗೋಪಾಲ ನಾಯಕ, ಸತೀಶ ನಾಯಕ, ಮಂಜು ಪಾಟೀಲ, ತಿಮ್ಮಪ್ಪ ನಾಯಕ, ರಮಾನಂದ ನಾಯಕ, ಗೋಪಾಲಕೃಷ್ಣ ನಾಯಕ, ಹರೀಶ ನಾಯಕ್, ರಾಮರಾಜ ಶೇಟ್, ಕೃಷ್ಣಮೂರ್ತಿ ಹಿರೇಗುತ್ತಿ, ಪರಿಸರ ನಾಯಕ, ರಾಜನ್ ನಾಯಕ ಮೊದಲಾದವರು ಉಪಸ್ಥಿತರಿದ್ದರು.