

ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಜೂ.14 ರಂದು ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೂಪಾಯಿ ಸಮಸ್ಯೆ, ಮೂಲ ಮತ್ತು ಪರಿಹಾರ ವಿಷಯವಾಗಿ ನಡೆಯಲಿರುವ ವಿಚಾರ ಸಂಕಿರಣವನ್ನು ಸಂಸದ ಜಿ.ಕುಮಾರನಾಯಕ ಉದ್ಘಾಟಿಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ ಆಗಮಿಸಲಿದ್ದಾರೆ ಎಂದರು.
ಕಾಲೇಜಿನ ಉಪನ್ಯಾಸಕ ಡಾ.ಪ್ರಾಣೇಶ ಕುಲ್ಕರ್ಣಿ ಮಾತನಾಡಿ ಸಂವಿಧಾನಿ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ ಇವರು ಪಿಎಚ್‌ಡಿ ಪದವಿಗೆ ಮಂಡಿಸಿರುವ ಪ್ರಬಂಧಕ್ಕೆ ಶತಕದ ಸಂಭ್ರಮ ಆದೇ ರೀತಿ 371(ಜೆ) ಕಾಯ್ದೆ ಜಾರಿಗೊಂಡು 10 ವರ್ಷ ಕಳೆದಿರುವ ಕುರಿತು ಎರಡು ಗೋಷ್ಟಿಗಳು ನಡೆಯಲಿವೆ. ರೂಪಾಯಿ ಸಮಸ್ಯೆ ಮತ್ತು ಪರಿಹಾರ ವಿಷಯವಾಗಿ ಬೆಂಗಳೂರಿನ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಎಕಾನಾಮಿಕ್ಸ್ ಚೇಂಜ್‌ನ ಆರ್‌ಬಿಐ ಪ್ರೋಫೆಸರ್ ಡಾ.ಕೃಷ್ಣ ರಾಜ್ ವಿಷಯ ಮಂಡಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸಹಾಯಕ ಪ್ರಾಧ್ಯಾಪಕ ಡಾ.ಎಂ. ಶಿವಪ್ಪ ವಹಿಸಿಕೊಳ್ಳಲಿದ್ದಾರೆ. ಎರಡನೇ ಗೋಷ್ಟಿ ಪ್ರಾದೇಶಿಕಸಮತೋಲನೆ ಮತ್ತು ವಿಶೇಷ ಸ್ಥಾನಮಾನ 371(ಜೆ) ಜಾರಿ ಕುರಿತಾಗಿ ಕೋಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಪ್ರೋಫೆಸರ್ ಡಾ. ಕಾಂಬ್ಳೆ ಪ್ರಕಾಶ ಶಂಕರ ವಿಷಯ ಮಂಡಿಸಲಿದ್ದಾರೆ. ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾರ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಉಪನ್ಯಾಸಕ ಡಾ.ಸೋಮನಾಥರೆಡ್ಡಿ.ಸಿ.ಪಾಟೀಲ್ ವಹಿಸಿಕೊಳ್ಳಲಿದ್ದಾರೆ. ವಿವಿಧ ಕಾಲೇಜಿನ ಉಪನ್ಯಾಸಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಂಜೆ. 4.30ಕ್ಕೆ ರತ್ನಪ್ರಭ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಗುತ್ತದೆ. 34 ಜನರು ಬರೆದ ಲೇಖನಗಳ ಸಂಗ್ರಹ ರತ್ನಪ್ರಭ ಸ್ಮರಣ ಸಂಚಿಕೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಎಲ್‌ಸಿ ಎ.ವಸಂತಕುಮಾರ, ವಾಲ್ಮೀಕಿ ವಿಶ್ವವಿದ್ಯಾಲಯಕುಲಸಚಿವ ಡಾ.ಕೆ.ವೆಂಕಟೇಶ, ಡಾ.ವೆಂಕಣ್ಣ, ಡಾ.ಪ್ರಾಣೇಶ ಕುಲ್ಕರ್ಣಿ, ಡಾ.ಶಿವಯ್ಯ ಹೀರೆಮಠ ಸೇರಿ ಕಾಲೇಜಿನ ಉಪನ್ಯಾಸಕರು ಭಾಗಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಮಹಾಂತೇಶ ಅಂಗಡಿ, ಡಾ.ಶಿವಯ್ಯ ಹೀರೆಮಠ, ಚಂದ್ರಶೇಖರ ಸಜ್ಜನ, ಮಹಾದೇವಪ್ಪ, ವೆಂಕಟೇಶ ಕಲ್ಮಾಲ ಇದ್ದರು.