

ಹೊಳೆಆಲೂರ: ಬಾಗಲಕೋಟೆ ಜಿಲ್ಲಾ ಮುಧೋಳದಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯ, 14 ರಿಂದ 17 ವಯೋಮಿತಿಯ ಬಾಲಕರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಗ್ರಾಮದ ಅನ್ನದಾನೇಶ್ವರ ನಗರದ ಬಾಲಕ ಕೃಷ್ಣಾ ಕಲ್ಲಪ್ಪ ಆಡಿನ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕೃಷ್ಣಾ ದಾವಣಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಕ್ಯಾಂಪ್ 2ನಲ್ಲಿ ಓದುತ್ತಿದ್ದಾನೆ.