

ಬೆಳ್ತಂಗಡಿ: ಬಿಜಾಪುರದ ತಾಳಿಕೋಟೆಯಲ್ಲಿ ನಡೆದ ಪದವಿ ಪೂರ್ವ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಬಾಲಕಿಯರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆದು ಆಂಧ್ರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ತಂಡದ ತರಬೇತುದಾರರಾಗಿ ಗುಣಪಾಲ್ ಎಂ. ಎಸ್. ಹಾಗೂ ಸಂದೀಪ್ ಶೆಟ್ಟಿ, ವ್ಯವಸ್ಥಾಪಕರಾಗಿ ನಮಿತಾ ಕೆ. ಆರ್. ಕಾರ್ಯನಿರ್ವಹಿಸಿದ್ದಾರೆ.