

ಸೋಮವಾರಪೇಟೆ : ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ವಿದ್ಯಾರ್ಥಿ ತರುಣ್ ಮುರಳೀಧರ್ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕೆಕ ಆಯ್ಕೆಯಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ವಿದ್ಯಾಭಾರತಿ ಸಂಸ್ಥೆಯು ಬೆಂಗಳೂರಿನ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತರುಣ್ ಪ್ರತಿನಿಧಿಸಿದ್ದರು.
ಸೆ.27 ರಂದು ದೆಹಲಿಯಲ್ಲಿ ಆಯೋಜಿಸಿರುವ ಸ್ಪರ್ಧೆಗೆ ತರಣ್ ಮುರಳೀಧರ್ ಆಯ್ಕೆಯಾಗಿದ್ದು, ಶಕ್ತಿ ಕಾಲೇಜಿನ ಕೋಚ್ ಮನೋಜ್ ತರಬೇತಿ ನೀಡಿದ್ದರು. ತರಣ್ ಮುರಳೀಧರ್, ಪತ್ರಕರ್ತ ಮುರಳೀಧರ್, ಸರಿತಾ ದಂಪತಿ ಪುತ್ರ.