ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’ಯ ಪ್ರಚಾರ ಭಿತ್ತಿ ಪತ್ರ ಅನಾವರಣ

mng---30 Aug Kalkura
Published on

ಮಂಗಳೂರು: ಕಲ್ಕೂರ ಪ್ರತಿಷ್ಠಾನವು ಆಯೋಜಿಸುವ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’ ಯು ಸೆ.6ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಜರಗಲಿದ್ದು, ಇದರ ಪ್ರಚಾರ ಭಿತ್ತಿ ಪತ್ರ ವನ್ನು ಮಂಗಳವಾರ ಸಂಜೆ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು.


ಯೋಗಪಟು ಗೋಪಾಲಕೃಷ್ಣ ದೇಲಂಪಾಡಿಯವರು ಭಿತ್ತಿ ಪತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಮನುಷ್ಯನ ಮನೋವಿಕಾಸಕ್ಕೆ ಪೂರಕವಾದ ಪರಿಕಲ್ಪನೆಯನ್ನು ಹೊಂದಿರುವ ಈ ಯೋಜನೆ ಮುಖ್ಯವಾಗಿ ಸಾಮಾಜಿಕ ಸ್ವಾಸ್ಥೃಕ್ಕೆ ಹೆಚ್ಚು ಪರಿಣಾಮಕಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.


ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಸ್ತಾವನೆಗೈದರು. ಈ ಸಂದರ್ಭ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಸೂರ್ಯನಾರಾಯಣ ಭಟ್, ಕಲಾ ಶಿಕ್ಷಕ ಜಾನ್ ಚಂದ್ರನ್, ಕದ್ರಿ ನವನೀತ ಶೆಟ್ಟಿ, ದಯಾನಂದ ಕಟೀಲ್, ಡಾ.ಎಂ. ಪ್ರಭಾಕರ ಜೋಶಿ, ಬಿ. ವಿಜಯಲಕ್ಷ್ಮೀ ಶೆಟ್ಟಿ, ಗೀತಾ ಲಕ್ಷ್ಮೀಶ, ಸುಧಾಕರ ರಾವ್ ಪೇಜಾವರ, ಉಮೇಶ್ ಕೆ.ಆರ್., ಪೂರ್ಣಿಮ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಜಿ.ಕೆ. ಭಟ್ ಸೇರಾಜೆ, ತಾರನಾಥ ಶೆಟ್ಟಿ ಬೋಳಾರ, ಲೀಲಾಕ್ಷ ಕರ್ಕೇರ, ಜಯಲಕ್ಷ್ಮೀ ಶ್ರೀರಂಗ ಸುರತ್ಕಲ್, ಮಂಜುಳಾ ಶೆಟ್ಟಿ, ರಾಕೇಶ್ ಹೊಸಬೆಟ್ಟು, ಕವಿತಾ ಪಕ್ಕಳ, ಸುಜಾತಾ, ತಮಿಳ್ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net