ಆಲಂಕಾರು ಶ್ರೀ ಭಾರತಿ ಪ್ರಾಥಮಿಕ ಶಾಲೆಗೆ ಪ್ರಶಸ್ತಿ : ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ

New Project (6)
Published on

ಕಡಬ: ಪುತ್ತೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ವಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ 20-25 ಕೆ.ಜಿ. ವಿಭಾಗದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.

ಕನ್ನಡ ವಿಭಾಗದ 3ನೇ ತರಗತಿಯ ಮೋಹಿತ್ ಯೆಲ್ಲೋ ಬೆಲ್ಟ್ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ, 4ನೇ ತರಗತಿ ವಿದ್ಯಾರ್ಥಿಗಳಾದ ಯದ್ವಿತ್ ಯೆಲ್ಲೋ ಬೆಲ್ಟ್‌ನಲ್ಲಿ ತೃತೀಯ ಮತ್ತು ಯೆಲ್ಲೋ ಬೆಲ್ಟ್ ಕಟಾ ವಿಭಾಗದಲ್ಲಿ ದ್ವಿತೀಯ, ಹರ್ಷಿತ್ ಯೆಲ್ಲೋ ಬೆಲ್ಟ್ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿಟೆಯಲ್ಲಿ ದ್ವಿತೀಯ, ಅಶ್ವಿತ್ ವೈಟ್ ಬೆಲ್ಟ್ ಕುಮಿಟೆಯಲ್ಲಿ ತೃತೀಯ, ಲತೇಶ್ ಯೆಲ್ಲೋ ಬೆಲ್ಟ್ ಕಟಾ ವಿಭಾಗದಲ್ಲಿ ದ್ವಿತೀಯ, 5ನೇ ತರಗತಿಯ ಅನ್ವಿತ್ ಯೆಲ್ಲೋ ಬೆಲ್ಟ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಕರಾಟೆ ತರಬೇತುದಾರ ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net