

ಮೈಸೂರು: ಕೇಂದ್ರ ಶಿಕ್ಷಣ ಸಚಿವಾಲಯ ಒಡಿಶಾದ ಭುವನೇಶ್ವರದಲ್ಲಿ ಜ.೨ ರಿಂದ ೬ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕಲೋತ್ಸವಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಎಚ್.ಡಿ. ಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಶಕುಂತಲಾ ರಾಜ್ಯಮಟ್ಟದ ಕಲೋತ್ಸವದಲ್ಲಿ ೩ಡಿ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡರು. ಶಕುಂತಲಾ ಜಿ.ಬಿ. ಸರಗೂರು ನಿವಾಸಿ ಮಹದೇವ-ಮಂಜುಳಾ ದಂಪತಿ ಪುತ್ರಿ.
ಇದೇ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕೆ. ರೂಪಾ ೨ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು. ರೂಪಾ ಜಿ.ಬಿ. ಸರಗೂರು ನಿವಾಸಿ ಕಾಳೇಗೌಡ-ಭಾಗ್ಯ ದಂಪತಿ ಪುತ್ರಿ. ರಾಷ್ಟ್ರಮಟ್ಟದ ಕಲೋತ್ಸವಕ್ಕೆ ಜಿ.ಬಿ. ಸರಗೂರು ಸರ್ಕಾರಿ ಪ್ರೌಢ ಶಾಲೆ ಸತತ ಮೂರನೇ ಬಾರಿಗೆ ಆಯ್ಕೆಗೊಂಡಿದೆ.
ರಾಜ್ಯಮಟ್ಟದ ಕಲೋತ್ಸವದಲ್ಲಿ ಬೋಗಾದಿಯ ಕ್ರೈಸ್ಟ್ ಪಬ್ಲಿಕ್ ಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿ ಆರ್. ಸನ್‌ಶ್ರೇಯ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಸನ್‌ಶ್ರೇಯ್ ಆರ್.ಟಿ. ನಗರ ನಿವಾಸಿ ರಾಜೇಶ್-ಸಂಗೀತಾ ದಂಪತಿ ಪುತ್ರ.