

ಬೆಳಗಾವಿ: ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ ಕೆ.ಕೆ. ವೇಣುಗೋಪಾಲ ಸಭಾಭವನದಲ್ಲಿ ಮಾ.7ರಿಂದ 9ರ ವರೆಗೆ ಎಂ.ಕೆ.ನಂಬಿಯಾರ್ ಸ್ಮರಣಾರ್ಥ 15ನೇ ರಾಷ್ಟ್ರಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ
ಎಸ್.ವಿ. ಗಣಾಚಾರಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ರಂದು ಸಂಜೆ 6ಕ್ಕೆ ಉದ್ಘಾಟನೆ ನಡೆಯಲಿದ್ದು, ಹೈಕೋರ್ಟ್ ನ್ಯಾಯಾೀಶ ಉಮೇಶ ಅಡಿಗ ಮುಖ್ಯಅತಿಥಿಯಾಗಿ ಆಗಮಿಸುವರು. ಸೊಸೈಟಿ ಕಾರ್ಯದರ್ಶಿ ವಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸುವರು ಎಂದರು.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಸೇರಿ 9 ರಾಜ್ಯಗಳ 42 ತಂಡಗಳು, 3 ರಾಷ್ಟ್ರೀಯ ಕಾನೂನು ಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. 40 ಕಾನೂನು ಪರಿಣಿತರು ತೀರ್ಪುಗಾರರಾಗಿದ್ದಾರೆ. ವಿವಿಧ ಸ್ಪರ್ಧೆಯ ವಿಜೇತರಿಗೆ 1,41,000 ಮೊತ್ತದ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
9ರಂದು ಸಂಜೆ 4ಕ್ಕೆ ಜರುಗುವ ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಹೈಕೋರ್ಟ್ ನ್ಯಾಯಾೀಶ ಜಿ.ಬಸವರಾಜ ಆಗಮಿಸುವರು. ಜಿಐಟಿ ಗೌರ್ನಿಂಗ್ ಕೌನ್ಸಿಲ್ ಚೇರ್ಮನ್ ರಾಜೇಂದ್ರ ಬೆಳಗಾಂವಕರ ಅಧ್ಯಕ್ಷತೆ ವಹಿಸುವರು ಎಂದರು. ಎ.ಎಚ್. ಹವಾಲ್ದಾರ, ವಿ.ಜಿ. ಕುಲಕರ್ಣಿ, ಅಶ್ವಿನಿ ಪರಬ್, ವಿ.ಎಂ. ದೇಶಪಾಂಡೆ, ಮೃಣಾಲ್ ಕಾಮತ ಇತರರಿದ್ದರು.