

ಪಡುಬಿದ್ರಿ: ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ವತಿಯಿಂದ ರಾಷ್ಟ್ರಮಟ್ಟದ ಒಪನ್ ಫಿಡೇ ರೇಟೆಡ್ ರ‌್ಯಾಫಿಡ್ ಚೆಸ್ ಸ್ಪರ್ಧೆ ಜೂನ್ 29 ಮತ್ತು 30ರಂದು ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಸ್ಥಾಪಕ ಸಾಕ್ಷಾತ್ ಯು.ಕೆ. ತಿಳಿಸಿದರು.
ಮಂಗಳೂರು ಎಫಿಲೆನ್ಸ್ ಟೆಕ್ನಾಲಜಿಸ್ ಮಾರ್ಕೆಟಿಂಗ್ ಕಂಪನಿ, ಯುಡಿಸಿಎ ಉಡುಪಿ, ಕೆಎಸ್‌ಸಿಎ, ಎಐಸಿಎಸ್ ಫಿಡೆಗಳ ಸಹಕಾರದೊಂದಿಗೆ ನಡೆಯುವ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ 2 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುವುದು. 6, 8, 10, 12, 14, 16 ವಯೋಮಿತಿಯ ಹುಡುಗರು ಮತ್ತು ಹುಡುಗಿಯರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಲ್ಲಿ ತಲಾ 10ರಂತೆ 120 ಟ್ರೋಫಿ, ಓಪನ್‌ನಲ್ಲಿ 20, ಇತರ ವಿಭಾಗದಲ್ಲಿ 47 ಟ್ರೋಫಿ ಸಹಿತ 187 ಟ್ರೋಫಿ ವಿತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಅಧ್ಯಕ್ಷ ಉಮಾನಾಥ್ ಕಾಪು, ನಿರ್ದೇಶಕಿ ಸೌಂದರ್ಯ ಯು.ಕೆ., ಮುಖ್ಯ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ ಉಡುಪಿ, ಸಲಹೆಗಾರ ನಾಗೇಶ್ ಕಾರಂತ್ ಕಾಪು, ಪಾಂಗಾಳ ಆಸರೆ ಸಂಸ್ಥೆಯ ಸ್ಥಾಪಕ ಪೆನ್ವೆಲ್ ಸೋನ್ಸ್, ಲೋಕೇಶ್ ಕೊಡ್ಮಾಣ್ ಸುದ್ದಿಗೋಷ್ಠಿಯಲ್ಲಿದ್ದರು.