

ಕುಶಾಲನಗರ:
ಕೋಲಾರದ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈಚೆಗೆ ನಡೆದ 17 ವರ್ಷದ ವಯೋಮಿತಿಯ ರಾಜ್ಯ ಮಟ್ಟದ ಶಾಲಾ ಅಥ್ಲೆಟಿಕ್ ಕ್ರೀಡಾಕೂಟ ವಿಭಾಗದಲ್ಲಿ ಭಾಗವಹಿಸಿದ್ದ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಎರಡು ಚಿನ್ನ ಮತ್ತು ಒಂದು ಕಂಚಿನ ಪದಕ ಗಳಿಸಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ರಾಷ್ಟ್ರ ಮಟ್ಟದ ಕ್ರೀಡಾಕೂಟ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿದ್ದು, ಕೂಡಿಗೆ ಕ್ರೀಡಾ ಶಾಲೆಯ ಬಿ. ಚನ್ನಬಸವ, ಡಿ. ಡಿ. ತಜ್ಞವಿ, ಸಿ.ಡಿ. ನೇಕ್ಷಾ, ಡಿ.ಕೆ
ಭವಿಷ್ಯ, ಕೆ. ಮಧು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ನ. 26. ರಿಂದ 30 ರ ವರೆಗೆ ನಡೆಯಲ್ಲಿದೆ. ಎಂದು ಕೂಡಿಗೆ ಕ್ರೀಡಾ ಶಾಲೆಯ ಅಥ್ಲೆಟಿಕ್ ತರಬೇತುದಾರ ಬಿ.ಡಿ. ಮಂಜುನಾಥ ತಿಳಿಸಿದ್ದಾರೆ.