

ಹೆಬ್ರಿ: ಆಂಧ್ರಪ್ರದೇಶ ವಿಜಯವಾಡದಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಕೂಟದಲ್ಲಿ ಅಮೃತ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಿತೀಶ್ ಕುಮಾರ್ ಚಿನ್ನದ ಪದಕ ಗೆದ್ದು, ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ವಿದ್ಯಾಭಾರತಿ ನಡೆಸುವ ರಾಷ್ಟ್ರಮಟ್ಟದ ಪಂದ್ಯಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಅಮೃತ ಭಾರತಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ನಿಶಾನ್ ಶೆಟ್ಟಿ, ಪ್ರವೀಣ್ ಹೆಗ್ಡೆ ತರಬೇತಿ ನೀಡಿದ್ದರು.