

ಅಡವಿಸೋಮಾಪೂರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯನ್ನು 9ನೆಯ ನವ್ಹಂಬರ್ 1995 ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು ನಾಗರಿಕರ ಪರವಾದ ಕಾನೂನು ಸೇವೆಗಳನ್ನು ನೀಡಲು ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರು ಕಾನೂನು ನೆರವು ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ಪಡೆಯಬಹುದು ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶ ಡಿ ಎಚ್ ಹೇಳಿದರು.
ಅವರು ಗದಗ ತಾಲೂಕಿನ ಅಡವಿಸೋಮಾಪೂರ ಸಣ್ಣ ತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯಲ್ಲಿ ಮಾತನಾಡುತ್ತಾ ಸಾಮಾನ್ಯ ನಾಗರಿಕರು ಕೂಡಾ ಸಂವಿಧಾನದ ನೀಡಿದ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಪ್ರತಿಯೊಬ್ಬರು ಹಕ್ಕುಗಳು ಪಡೆಯಬೇಕು ಅದರಂತೆ ಕರ್ತವ್ಯಗಳನ್ನು ಕೂಡಾ ಪಾಲನೆ ಮಾಡಬೇಕು ಎಂದರು.
ಶಿಕ್ಷಕ ಎಸ್ ಜಿ ಅಮ್ಮಿನಭಾವಿ ಭಾರತದ ಸಂವಿಧಾನ ಪೀಠಿಕೆ ಓದಿಸಿ, ಕಾನೂನು ಅರಿವು ನೆರವು ಕುರಿತು ಮಾಹಿತಿ ನೀಡಿದರು. ಶಿಕ್ಷಕಿಯರಾದ ಎಸ್ ಟಿ ಹಳಕಟ್ಟಿ , ಪಿ ಬಿ ಕಿಲಬನವರ, ಎಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ ಪವಾರ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಲಮಾಣಿ, ಮಂಜುನಾಥ ರಜಪೂತ ಮಲ್ಲೇಶ ಲಮಾಣಿ ರಾಮಣ್ಣ ಲಮಾಣಿ, ಸಕ್ಕುಬಾಯಿ ಲಮಾಣಿ ಮೀರವ್ವ ಲಮಾಣಿ, ಸುಮಿತ್ರಾ ನಾಯಕ, ಸುಮಿತ್ರಾ ಲಮಾಣಿ, ಸರೋಜಾ ಲಮಾಣಿ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಇದ್ದರು.