ವಕೀಲರಲ್ಲಿ ಭಾಷಾ ಪ್ರಾವೀಣ್ಯ ಮುಖ್ಯ, ಎಸ್‌ಡಿಂ ಕಾನೂನು ಹಬ್ಬ ಸಮಾರೋಪದಲ್ಲಿ ಕೃಷ್ಣ ಭಟ್ ಪ್ರತಿಪಾದನೆ

SDM mangalore
ಎಸ್‌ಡಿಎಂ ಕಾನೂನು ಹಬ್ಬದಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು ವಿದ್ಯಾರ್ಥಿಗಳಿಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಕೃಷ್ಣ ಭಟ್ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ತಾರಾನಾಥ, ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉದಯ ಪ್ರಕಾಶ್ ಮುಳ್ಯ, ಕಾನೂನು ಹಬ್ಬದ ಸಂಚಾಲಕಿ ಡಾ.ರೇಷ್ಮಾ ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ವಕೀಲರಿಗೆ ಭಾಷೆಯ ಪ್ರಾವೀಣ್ಯತೆ ಹಾಗೂ ಹಿಡಿತ ಅತಿ ಅಗತ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಕೃಷ್ಣ ಭಟ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಹಬ್ಬದ ಸಮಾರೋಪದಲ್ಲಿ ಇತ್ತೀಚೆಗೆ ಮಾತನಾಡಿದರು.

ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಕೀಲ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉದಯ ಪ್ರಕಾಶ್ ಮುಳ್ಯ ಮುಖ್ಯ ಅತಿಥಿಯಾಗಿದ್ದರು. ಕಾನೂನು ಹಬ್ಬ ಸಂಚಾಲಕಿ ಡಾ.ರೇಷ್ಮಾ, ವಿದ್ಯಾರ್ಥಿ ನಾಯಕಿ ಅನ್ಸಿಟಾ ಒಲಿವಿಯಾ ಪಿಂಟೊ, ವಿದ್ಯಾರ್ಥಿ ಸಂಯೋಜಕರಾದ ಜ್ಯಾನಿಸ್ ಮರಿಯಾ ಸಲ್ಡಾನ್ಹಾ, ಸಚಿನ್ ಹೆಗ್ಡೆ ಹಾಗೂ ದೀಕ್ಷಾ ಉಪಸ್ಥಿತರಿದ್ದರು. ವಿನೀತ್ ದೇವಾಡಿಗ ಸ್ವಾಗತಿಸಿ, ದೀಕ್ಷಾ ವಂದಿಸಿದರು. ನರಸಿಂಹ ಭಂಡಾರಿ ಬಹುಮಾನಿತರ ಪಟ್ಟಿ ವಾಚಿಸಿದರು. ಸ್ವಾತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಕಾನೂನು ಹಬ್ಬದಲ್ಲಿ ದೇಶದ ವಿವಿಧ ಕಾಲೇಜುಗಳ 18 ತಂಡಗಳು ಭಾಗವಹಿಸಿದ್ದು, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಬಿ.ಎಂ.ಎಸ್ ಕಾನೂನು ಕಾಲೇಜುಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ತಂಡ ಪ್ರಶಸ್ತಿ ಗಳಿಸಿದರು.

---------------------

ವಕೀಲರು ಉತ್ತಮ ಭಾಷಾ ಜ್ಞಾನ ಹೊಂದಿದ್ದಾಗ ಮಾತ್ರ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲು ಸಾದ್ಯ. ಭಾಷೆಯ ಜತೆಗೆ ಚರಿತ್ರೆಯ ಜ್ಞಾನ ಹಾಗೂ ಪ್ರಾಮಾಣಿಕತೆಯೂ ಪ್ರಾಮುಖ್ಯ ಪಡೆಯುತ್ತದೆ. ಇವೆರಡನ್ನೂ ರೂಢಿಸಿಕೊಂಡಾಗ ವಕೀಲರು ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಪಿ.ಕೃಷ್ಣ ಭಟ್

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net