ವಿಶ್ವಕರ್ಮ ಜಯಂತಿಯೇ ನಿಜವಾದ ಕಾರ್ಮಿಕ ದಿನ : ಭಗವಾನ್ ದಾಸ್ ಹೇಳಿಕೆ

New Project (17)
Published on

ಮೂಡುಬಿದಿರೆ: ಭಾರತೀಯ ಮಜ್ದೂರು ರಾಷ್ಟ್ರೀಯ ಚಿಂತನೆಯುಳ್ಳ ಸಂಘಟನೆ. ಕಮ್ಯೂನಿಸ್ಟ್ ವಾದದವರು ಮೇ ಡೇಯಂದು ಕಾರ್ಮಿಕರ ದಿನ ಆಚರಿಸುತ್ತಾರೆ. ಆದರೆ ನಿಜವಾದ ಕಾರ್ಮಿಕ ವಿಶ್ವಕರ್ಮ. ಆತನ ಜಯಂತಿಯಂದೇ ವಿಶ್ವದ ಕಾರ್ಮಿಕರೇ ವಿಶ್ವವನ್ನು ಒಗ್ಗೂಡಿಸಿ ಎಂಬ ಧ್ಯೇಯದೊಂದಿಗೆ ಕಾರ್ಮಿಕರ ದಿನ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೋರಾಟ ನಡೆಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಎಂಎಸ್ ರಾಜ್ಯ ಘಟಕ ಮಾಜಿ ಉಪಾಧ್ಯಕ್ಷ ಭಗವಾನ್ ದಾಸ್ ಹೇಳಿದರು.

ವಿಶ್ವಕರ್ಮ ಜಯಂತಿ ಪ್ರಯುಕ್ತ ಭಾರತೀಯ ಮಜ್ದೂರು ಸಂಘ ಮೂಡುಬಿದಿರೆ ತಾಲೂಕು ಸಮಿತಿ ವತಿಯಿಂದ ರಾಷ್ಟ್ರೀಯ ಕಾರ್ಮಿಕ ದಿನವನ್ನು ಸಮಾಜ ಮಂದಿರಲ್ಲಿ ಬುಧವಾರ ಆಚರಿಸಿ ಮಾತನಾಡಿದರು.

ಮೂಡುಬಿದಿರೆ ತಾಲೂಕು ಸಮಿತಿ ಅಧ್ಯಕ್ಷ ರಾಜೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕಾರಿಣಿ ಸದಸ್ಯ ಚಂದ್ರಹಾಸ ಆಚಾರ್ಯ ಅವರನ್ನು ಗೌರವಿಸಲಾಯಿತು. ಮಜ್ದೂರು ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪರ್ಯಾವರಣ್ ಸಹಸಂಚಾಲಕ ಮಂಜುನಾಥ ಶೆಟ್ಟಿ, ಉದ್ಯಮಿ ಅಜಯ್ ಶೆಟ್ಟಿ, ಐಬಿಎಂಎಸ್ ತಾಲೂಕು ಪ್ರಭಾರಿ ಪ್ರಮೋದ್ ರಾಜ್ ಪೆರಾಡಿ, ಮೂಡುಬಿದಿರೆ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು, ಉಪಾಧ್ಯಕ್ಷರಾದ ಜಯರಾಮ್ ರಾವ್, ಪದ್ಮನಾಭ ಇರುವೈಲು ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net