ಅಪರಾಧ ತಡೆಗೆ ನ್ಯಾಷನಲ್​ ಇಂಟಲಿಜೆನ್ಸ್​ ಗ್ರಿಡ್​ ಸಹಕಾರಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿಕೆ

Shah new
Published on

ಬೆಂಗಳೂರು: ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಸಾಸ್ಟರ್​ ರಿಕವರಿ ಸೆಂಟರ್​ "ನ್ಯಾಷನಲ್​ ಇಂಟಲಿಜೆನ್ಸ್​ ಗ್ರಿಡ್​' ಸಹಕಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದ್ದಾರೆ.

ಬೆಂಗಳೂರಿನ ಸಾತನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಡಿಸಾಸ್ಟರ್​ ರಿಕವರಿ ಸೆಂಟರ್​ "ನ್ಯಾಷನಲ್​ ಇಂಟಲಿಜೆನ್ಸ್​ ಗ್ರಿಡ್​'ನ ಬೆಂಗಳೂರು ಕ್ಯಾಂಪಸ್​ಗೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ. ವಿಶ್ವಾಸಾರ್ಹ ಮೂಲಗಳಿಂದ ಪಡೆದ ಮಾಹಿತಿಗೆ ಸ್ವಯಂಚಾಲಿತ, ಸುರತ ಮತ್ತು ತಣವೇ ಸಂಪರ್ಕ ದೊರೆಯುವಂತಾಗಲು ಕಾನೂನು ಮತ್ತು ಭದ್ರತಾ ಏಜೆನ್ಸಿಗಳ ಅವಶ್ಯಕತೆಯಿದೆ. ಹವಾಲಾ ವಹಿವಾಟು, ಭಯೋತ್ಪಾದಕ ನಿಧಿ, ನಕಲಿ ಕರೆನ್ಸಿ, ಮಾದಕ ದ್ರವ್ಯ, ಬಾಂಬ್​ ಬೆದರಿಕೆಗಳು, ಅಕ್ರಮ ಶಸಾಸ ಕಳ್ಳಸಾಗಣೆ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಶ್ರೀದಲ್ಲೆ ರಾಷ್ಟ್ರೀಯ ಡೇಟಾಬೇಸ್​ ಅನ್ನು ಅಭಿವೃದ್ಧಿಪಡಿಸಲಿದೆ.

"ನ್ಯಾಷನಲ್​ ಇಂಟಲಿಜೆನ್ಸ್​ ಗ್ರಿಡ್​' ಸುಸಜ್ಜಿತ ಇನ್​ಬಿಲ್ಟ್​ ಮೆಕಾನಿಸಮ್​ನ್ನು ಹೊಂದಿದ್ದು, ದೇಶಾದ್ಯಂತ ಹಳೆಯ ಆರೋಪಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ. ನಿರಂತರ ನವೀಕರಣಕ್ಕಾಗಿ ಅಂತರ್​ನಿರ್ಮಿತ ಕಾರ್ಯವಿಧಾನ ಹೊಂದಿದೆ ಎಂದು ಗೃಹ ಸಚಿವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಅರಗ ಾನೇಂದ್ರ, ಗೃಹ ಇಲಾಖೆ ಎಸಿಎಸ್​ ಡಾ.ರಜನೀಶ ಗೋಯಲ್​, ಡಿಜಿಪಿ ಪ್ರವಿಣ್​ ಸೂದ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net