ನೇಕಾರಿಕೆ ಪರಿಪೂರ್ಣ ಉದ್ಯಮ: ಪುತ್ತಿಗೆ ಶ್ರೀ

udp-7-kaimagga
Published on

ಉಡುಪಿ: ಎಲ್ಲಾ ವರ್ಗದ ಜನರಿಗೂ ಕೈಮಗ್ಗದ ಉತ್ಪನ್ನಗಳು ಲಭ್ಯವಾಗುತ್ತಿದ್ದು, ನೇಕಾರಿಕೆ ಉದ್ಯಮ ಪರಿಪೂರ್ಣತೆಯ ಟಕ್ಕೆ ತಲುಪಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಪರ್ಯಾಯ ಪುತ್ತಿಗೆ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವತಿಯಿಂದ ನಡೆದ ರಾಷ್ಟೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ಸೀರೆಗಳ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪುರುಷರಿಗೆ ಲಿನನ್​ ಅಂಗಿಗಳು ಬಿಡುಗಡೆಗೊಂಡಿದ್ದು, ಕೃಷ್ಣಾಷ್ಟಮಿಗೆ ಮಹಿಳೆಯರು ಕೈಮಗ್ಗದ ಸೀರೆ ಮತ್ತು ಪುರುಷರು ಅಂಗಿಗಳನ್ನು ಧರಿಸಿ ಭಾಗವಹಿಸಬೇಕು. ಈ ಮೂಲಕ ಪಾರಂಪರಿಕ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್​, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಶ್ರೀಕೃಷ್ಣ ಕೊಡಂಚ, ವಿಜಯಕೊಡವೂರು, ರಜನಿ ಹೆಬ್ಬಾರ್​, ಮಂಜುನಾಥ ಮಣಿಪಾಲ್​, ಆರೆಸ್ಸೆಸ್​ ಮುಖಂಡ ಡಾ. ನಾರಾಯಣ ಶೆಣೈ, ಡಾ. ವಿಜಯೀಂದ್ರ, ಉದ್ಯಮಿ ವಿಜಿ ಶೆಟ್ಟಿ, ಪದ್ಮಶಾಲಿ ಪ್ರತಿಷ್ಠಾನದ ರತ್ನಾಕರ ಇಂದ್ರಾಳಿ, ರೋಬೋಸಾಪ್ಟ್​ನ ಕಾರ್ತಿಕ್​, ಸುರೇಶ್​ ಶೆಟ್ಟಿಗಾರ್​, ಜಯಕರ ಶೆಟ್ಟಿಗಾರ್​, ವಿವೇಕ್​ ಶೆಟ್ಟಿಗಾರ್​, ಪ್ರಭಾಶಂಕರ್​, ಶ್ರೀರಾಮ ಗುರಿಕಾರ್​, ಗಣೇಶ್​ ಶೆಟ್ಟಿಗಾರ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net