

ಬೈಂದೂರು: ರಾಷ್ಟ್ರೀಯ ಹಬ್ಬಗಳಿಗೆ ತನ್ನದೇ ಆದ ಪ್ರಾಮುಖ್ಯತೆಗಳಿವೆ. ಆದ್ದರಿಂದ ಎಲ್ಲ ರಾಷ್ಟೀಯ ಹಬ್ಬಗಳ ಆಚರಣೆಯನ್ನು ಅತ್ಯಂತ ಶ್ರದ್ಧೆ ಹಾಗೂ ಆಸಕ್ತಿಯಿಂದ ಆಚರಿಸಲು ಬೇಕಾದ ಎಲ್ಲ ಕ್ರಮಗಳನ್ನು ಅಧಿಕಾರಿಗಳು ತೆಗೆದು ಕೊಳ್ಳಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹಬ್ಬಗಳ ಆಚರಣೆ ಕಡೆಗಣನೆ ಸಲ್ಲದು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ತಾಲೂಕು ಪ್ರಜಾಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ವಚ್ಛ ಗ್ರಾಮ ಹಾಗೂ ನಶಾಮುಕ್ತ ಗ್ರಾಮ ಹಿನ್ನಲೆಯಲ್ಲಿ ಆಚರಿಸಲು ಉದ್ದೇಶಲಾಗಿದ್ದು ಅದರಂತೆ ಬೈಂದೂರು ಈ ಎರಡು ವಿಷಯಗಳಲ್ಲಿ ಗುರಿ ಸಾಧಿಸಲು ಸಂಕಲ್ಪಿಸಲಾಗಿದೆ ಎಂದರು.
ಬೈಂದೂರು ತಾಲೂಕು ತಹಸೀಲ್ದಾರ್ ರಾಮಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜ್‌ಕುವಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.