ಜಗತ್ತಿಗೆ ಇಂಜಿನಿಯರ್‌ಗಳ ಕೊಡುಗೆ ಅತ್ಯಮೂಲ್ಯ: ಪ್ರಾಂತಪಾಲ ಕೆ.ಟಿ.ಹನುಮಂತು ಅಭಿಮತ

National Engineers Day Mandya
Published on

ಮಂಡ್ಯ: ಜಗತ್ತಿಗೆ ಇಂಜಿನಿಯರ್‌ಗಳ ಕೊಡುಗೆ ಅತ್ಯಮೂಲ್ಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಕಾವೇರಿ ಉದ್ಯಾನದಲ್ಲಿರುವ ಸರ್.ಎಂ.ವಿ ಪ್ರತಿಮೆ ಆವರಣದಲ್ಲಿ ಷುಗರ್ ಸಿಟಿ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಇಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುವುದು ಅತ್ಯಾವಶ್ಯಕ ಎಂದು ನುಡಿದರು.

ಅಗತ್ಯಯುಳ್ಳ ತಂತ್ರಜ್ಞಾನವನ್ನು ಅಳವಡಿಸುವಲ್ಲಿ, ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಪಾತ್ರ ನೀಡುವಲ್ಲಿ ಇಂಜಿನಿಯರ್‌ಗಳು ವಹಿಸುವ ನಿರ್ಣಾಯಕವನ್ನು ಗೌರವಿಸಬೇಕಿದೆ. ಸರ್‌ಎಂವಿ ಅವರು ಇಂಜಿನಿಯರ್ ಮತ್ತು ಶಿಕ್ಷಣ ತಜ್ಞರಷ್ಟೇ ಅಲ್ಲ. ಶ್ರಮಶೀಲ ವ್ಯಕ್ತಿ ಎಂದು ಬಣ್ಣಿಸಿದರು.

ಪ್ರತಿಭಾಂಜಲಿ ಸಂಸ್ಥೆ ಅಧ್ಯಕ್ಷ ಪ್ರೊ.ಡೇವಿಡ್, ಷುಗರ್ ಸಿಟಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ರಾಧಾಕೃಷ್ಣ, ಖಜಾಂಚಿ ಸೋಮಶೇಖರ್, ನಾಗಣ್ಣ, ಎಲ್‌ಐಸಿ ಮಹೇಶ್‌ಬಾಬು, ಮಲ್ಲಿಕಾರ್ಜುನ್, ಸುನಿಲ್‌ಬಾಬು, ಯೋಗೇಶ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಮೈಷುಗರ್ ಕಂಪನಿಯ ಉಪ ಮುಖ್ಯ ಇಂಜಿನಿಯರ್ ಎಚ್.ಎಸ್.ಶಿವಶಂಕರ್ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಶೋಭಾ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net