

ಬಾಗಲಕೊಟೆ: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪಕ್ಷಾತಿತ, ಶಿಕ್ಷಕ ಸಂಘಟನೆಗಳು ಶಿಕ್ಷಕರು ಜೀವನ ಮರಣದ ಹೋರಾಟಮಾಡುವ ಅಗತ್ಯವಿದೆ ಎಂದು ಬೆಂಗಳೂರಿನ ಖ್ಯಾತ ಪತ್ರಕರ್ತ ರವೀಂದ್ರ ರೇಷ್ಮೆ ಹೇಳಿದರು.
ಅವರು ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸಭಾಭವನದಲ್ಲಿ ಸೋಮವಾರ ಪೀಪಲ್ಸ್ ಘೋರಮ್ ಫಾರ್ ಕರ್ನಾಟಕ ಎಜ್ಯುಕೇಷನ್ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಶಿಕ್ಷಣ ತಜ್ಞರ ವಿಷೇಶ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.
ದೇಶದಲ್ಲಿ ಮೊದಲು ರಾಷ್ಟ್ರೀಯ ನೀತಿಗಳನ್ನು ತಂದವರು ಕಾಂಗ್ರಸ್ಸ್ ಪಕ್ಷದವರೆಯಾದರೂ ಇಂದು ಅವರು ವಿರೋದಿಸುತ್ತಿರುವುದಕ್ಕೆ ಮೋದಿ ಅವರ ಹೆಸರು ಕಾರಣವಾಗಿದೆ, ಆದರೆ ಇದು ವರೆಗೂ ಕಾಂಗ್ರೇಸ್ಸ್ ಪಕ್ಷದ ಹೈಕಮಾಂಡ ಹಾಗೂ ಸೋನಿಯಾ ಗಾಂದಿ ಕೂಡಾ ಈ ರಾಷ್ಟ್ರೀಯ ಶಿಕ್ಷಣ ನೀತಿ ವಿರೋದಿಸಿಲ್ಲಾ, ರಾಜ್ಯದಲ್ಲಿ ಕಾಂಗ್ರೇಸ್ಸ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಶಿಕ್ಷಣ ರಂಗಕ್ಕೆ ತಡೆ ಬಂದಿರುವ ಬಗ್ಗೆ ಅನೇಕ ಉಧಾರಣೆಗಳು ಇವೆ,
ರಾಷ್ಟೀಯ ಶಿಕ್ಷಣ ನೀತಿ ಬಗ್ಗೆ ಉತ್ತರ ಭಾರತ ಸಂಸ್ಕೃತಿ ಹೆರುವ ಹುನ್ನಾರವಿದೆ ಎಂದು ಹೇಳುವ ಇಂದಿನ ಪ್ರಾಥಮಿಕ ಶಿಕ್ಷಣ ಸಚಿವರ ಮಾತು ಅದು ರಾಷ್ಟೀಯ ಕಾಂಗ್ರೇಸ್ಸ ಪಕ್ಷಕ್ಕೆ ಹಾಗೂ ನೇಹರು ಹಾಗೂ ಇಂದಿರಾ ಕುಟುಂಬಕ್ಕೆ ಮಾಡಿದ ಅಪಮಾನ ವಾಗಿದೆ, ಒಂದು ರಾಷ್ಟ್ರೀಯ ಪಕ್ಷದ ಮುಖ್ಯಮಂತ್ರಿಯಾಗಿ ಒಂದು ರಾಷ್ಟೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸುತ್ತಿರುವುದು ವಿಪರ್ಯಾಸ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟೀಯ ಶಿಕ್ಷಣ ನೀತಿ ಕುರಿತು ಚರ್ಚೆಗೆ ಸರ್ವಪಕ್ಷದ ಸಭೆ ಕರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿಯಾದ ಡಾ.ಗೀರಿಶ ತೆಗ್ಗಿನಮಠ ಮಾತನಾಡಿ ಶಿಕ್ಷಣ ಎಂದರೆ ಹಣ ಗಳಿಸುವ ಮಾರ್ಗವಲ್ಲ ಅದು ಪರಿಪೂರ್ಣತೆಯ ಮನುಷ್ಯನನ್ನು ನಿರ್ಮಾಣಮಾಡುವುದಾಗಿದೆ, ಈ ಮೇಕಾಲೆ ಶಿಕ್ಷಣ ಗುಲಾಮರನ್ನು ತಯಾರು ಮಾಡುವ ಶಿಕ್ಷಣ ಪದ್ದತಿಯಾಗಿದೆ ಅದು ಬೇಡ ನಮಗೆ, ನಮ್ಮ ಭಾರತೀತೆಗೆ ಬೇಕಾಗುವು ನಮ್ಮ ಮೂಲ ಗುರುಕುಲ ಶಿಕ್ಷಣದ ಅವಶ್ಯಕತೆ ಇದೆ, ಶಿಕ್ಷಕ್ಷರು ಋಷಿಗಳಂತೆ ಬದುಕಬೇಕು,ಭಾರತ ಭಾರತವಾಗಿ ಉಳಿಯಲು ರಾಷ್ಟೀಯ ಶಿಕ್ಷಣ ನೀತಿಯ ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡಿದ ವಿಜಯಪುರದ ಬಿ.ಎಲ್.ಡಿ.ಇ ಮೆಡಿಕಲ್ ನ ವಿಶ್ರಾಂತ ಕುಲಪತಿಗಳಾದ ಪ್ರೋ ಸತೀಶ ಜಿಗಜಿನ್ನಿ ರಾಷ್ಟಿçಯ ಶಿಕ್ಷಣ ನೀತಿ ಇದು ಅಂತರರಾಷ್ಟ್ರೀಯ ಶಿಕ್ಷಣ ನೀತಿಯಾಗಿದ್ದು ಈ ಶಿಕ್ಷಣ ನೀತಿ ಸರ್ವಾಂಗಿಣ ಅಭಿವೃದ್ದಿಗಾಗಿ ಇದರಲ್ಲಿ ಜಾಗತಿಕವಾಗಿ 17 ಗುರಿಗಳನ್ನು ನಮೊಧಿಸಲಾಗಿದೆ, ಈ ಗುರಿಗಳನ್ನು ಪಾಲಿಸಿಸುವುದ ಪ್ರತಿದೇಶದ ಕರ್ತವ್ಯವಾಗಿದೆ, ಅಂತರಾಷ್ಟ್ರೀಯ ಮನ್ನಣೆಗೆ ನಾವು ಈ ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ತರಬೇಕಾಗಿದೆ, ಇದು ಒಂದು ಭಾರತೀಯ ನೈತಿಕತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬುಸುವತ್ತ ಇಟ್ಟ ಹೆಜ್ಜೆಯಾಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ಜೋತಗೆ ಈ ಶಿಕ್ಷಣ ನೀತಿಯಲ್ಲಿ ತ್ರೀಬಾಷಾ ಸೂತ್ರ ಅಳವಡಿಸಿದ್ದು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಆರ್.ನಾಗೇಶ, ಮಾಜಿ ಶಾಸಕ ಬಿ.ವ್ಹಿವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ತ್ ಸದಸ್ಯ ಹನಮಂತ ನಿರಾಣಿ, ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಗುರುಬಸವ ಸೂಳಿಬಾವಿ,ಅಶೋಕ ಸಜ್ಜನ,ಮಹಾಂತೇಶ ಶೆಟ್ಟರ, ಎಸ್,ಆರ,ಮನಹಳ್ಳಿ,ಜಿಬಿ. ದಾನಶೆಟ್ಟಿ.ವಿ.ಪಿ ಗಿರಿಸಾಗರ ಉಪಸ್ಥಿತರಿದ್ದರು.