ವೈದ್ಯರ ನಿಸ್ವಾರ್ಥ ಸೇವೆ, ಕೊಡುಗೆ ಅನನ್ಯ

UDP-2-4-Doctor
ಉಡುಪಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಡಾ. ಗಣೇಶ್​ ಪೈ, ಡಾ. ರಾಜಗೋಪಾಲ್​ ಶೆಣೈ, ಡಾ. ನಾಗರತ್ನಾ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ. ರಾಜಲಕ್ಷ್ಮೀ, ಡಾ. ಆಮ್ನಾ ಹೆಗ್ಡೆ, ಅಧ್ಯಕ್ಷೆ ಡಾ. ಇಂದಿರಾ ಶಾನ್​ಭಾಗ್​ ಇತರರಿದ್ದರು.
Published on

ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಪ್ರಶಂಸೆ | ಡಾಕ್ಟರ್ಸ್​ ಡೇ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ
ವೈದ್ಯಕೀಯ ವೃತ್ತಿ ತುಂಬ ಅಮೂಲ್ಯವಾದದ್ದು. ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ನಿಷ್ಕಾಮ, ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರ ಕೊಡುಗೆ ಅನನ್ಯವಾದದ್ದು ಎಂದು ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಪ್ರಶಂಸೆ ವ್ಯಕ್ತಪಡಿಸಿದರು.

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ವೈದ್ಯರಿಗಿರುವ ಸವಾಲು ಹಾಗೂ ಆ ಸವಾಲುಗಳನ್ನು ಜಯಿಸಿ ಹೇಗೆ ಮುನ್ನಡೆ ಸಾಧಿಸಬೇಕು ಎಂಬ ಕುರಿತು ಮಾಹಿತಿ ನೀಡಿದರು.

ವೈದ್ಯರಿಗೆ ಸನ್ಮಾನ

ಹಿರಿಯ ವೈದ್ಯರಾದ ಮಣಿಪಾಲದ ಕುಟುಂಬ ವೈದ್ಯ ಡಾ. ಗಣೇಶ್​ ಪೈ, ಕಸ್ತೂರ್ಬಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ನ ಡಾ. ರಾಜಗೋಪಾಲ್​ ಶೆಣೈ ಹಾಗೂ ಉಡುಪಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಯುವ ವೈದ್ಯ ಪ್ರತಿಭೆ ಡಾ. ವಿನುತಾ ವಿನೋದ್​, ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನದ ಮೂಲಕ ಮೌನ ಕ್ರಾಂತಿ ನಡೆಸಿದ ಡಾ. ಸತೀಶ್​ ಕಾಮತ್​, ಆರ್ಯಭಟ ಪ್ರಶಸ್ತಿ ವಿಜೇತೆ ಡಾ. ಶ್ರುತಿ ಬಲ್ಲಾಳ್​ ಅವರನ್ನೂ ಗೌರವಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯೆ ಡಾ. ರಾಜಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ. ಆಮ್ನಾ ಹೆಗ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಇಂದಿರಾ ಶಾನ್​ಭಾಗ್​ ಹಾಗೂ ಖಚಾಂಚಿ ಡಾ. ಅಕ್ಷತಾ ರಾವ್​ ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ಡಾ. ಶರತ್​ ಚಂದ್ರ ರಾವ್​ ಅವರು ಡಾ. ಬಿ.ಸಿ ರಾಯ್​ ಅವರಿಗೆ ನುಡಿ ನಮನ ಸಲ್ಲಿಸಿದರು. ಡಾ. ವತ್ಸಲಾ ರಾವ್​ ಹಾಗೂ ಡಾ. ವೀಣಾ ಉಮೇಶ್​ ಕಾರ್ಯಕ್ರಮ ನಿರೂಪಿಸಿದರು. ಭಾ.ವೈ.ಸಂಘದ ಕಾರ್ಯದರ್ಶಿ ಡಾ. ಅರ್ಚನಾ ಭಕ್ತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net