

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರಿನ ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ಶಸ್ತçಚಿಕಿತ್ಸಾ ಪ್ರಾಧ್ಯಾಪಕ ಡಾ. ಪ್ರಕಾಶ ಮಹಾಲಿಂಗಶೆಟ್ಟಿ, ಹಿರಿಯ ಎಲುಬು ಮತ್ತು ಕೀಲು ಚಿಕಿತ್ಸಕ ಹಾಗೂ ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್ ಹಾಗೂ ನುರಿತ ವೈದ್ಯಕೀಯ ಚಿಕಿತ್ಸಕಿ ಡಾ. ಶೀಲಾ ಕುದರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತ ಡಾ. ಪ್ರಕಾಶ ಮಹಾಲಿಂಗಶೆಟ್ಟಿ ಮಾತನಾಡಿ, ವೈದ್ಯರು ರೋಗಿಗಳ ಆರೋಗ್ಯ ಮತ್ತು ಸಾಮಾಜಿಕ ಮನಸ್ಥಿತಿ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರ ತೃಪ್ತಿಯ ಮೂಲವಾಗಬೇಕು. ಹೊಸ ವಿಷಯಗಳ ಅಧ್ಯಯನ ವೈದ್ಯರ ಜ್ಞಾನ ಹೆಚ್ಚಿಸುತ್ತದೆ. ಸರಳತೆ ಮತ್ತು ಕೃತಜ್ಞತಾ ಮನೋಭಾವ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಉಪ ಕುಲಪತಿ ಡಾ. ನಿರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿ ಜೀವಂಧರ್ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಇತರರಿದ್ದರು.
ಉಪ ಪ್ರಾಚಾರ್ಯ ಡಾ. ವಿದ್ಯಾ ಪಾಟೀಲ ಸ್ವಾಗತಿಸಿದರು. ಡಾ. ಸುರೇಶ ಬಡಿಗೇರ, ಡಾ. ಸುನಿಲ ಎಂ., ಡಾ. ಕಿರಣ ಐತಾಳ್ ಪರಿಚಯಿಸಿದರು. ಡಾ. ಪ್ರಿಯಾ0ಕಾ ಮೋತಿ ನಿರೂಪಿಸಿದರು. ಡಾ. ಆಶಾ ನೆರವಿ ವಂದಿಸಿದರು.