

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದು ಉತ್ಪಾದನಾ ಕ್ಷೇತ್ರದಲ್ಲಿ ಅನಪೇಕ್ಷಿತ ಸ್ಪರ್ಧೆ ಬೆಳೆಯುತ್ತಿದೆ. ಉತ್ಪನ್ನಗಳ ಖರೀದಿಗಾಗಿ ಗ್ರಾಹಕರನ್ನು ಮೋಸ ಮಾಡವಲ್ಲಿಯೂ ಕಂಪನಿಗಳ ಮಧ್ಯೆ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಽÃಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಹೇಳಿದರು.
ನಗರದ ಕೆಪಿಇಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಮೆಚ್ಚಿಸಿ ಅವರನ್ನು ಸೆಳೆಯಲು ಆಕರ್ಷಕ ದೃಶ್ಯ ಬಳಸುವ ಕಂಪನಿಗಳು, ಸಣ್ಣ ಅಕ್ಷರಗಳಲ್ಲಿ ಎಚ್ಚರಿಕೆಗಳನ್ನು ನಮೂದಿಸಿರುತ್ತವೆ. ರುಚಿ ಹೆಚ್ಚಿಸಲು ಮತ್ತು ಆಕರ್ಷಕವಾಗಿ ಕಾಣಲು ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಳಸುತ್ತಾರೆ. ನೈಸರ್ಗಿ ಆಹಾರ ಉತ್ಪನ್ನಗಳನ್ನು ಖರೀದಿಸಲು ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ವಿಶಾಲಾಕ್ಷಿ ಬೊಳಶೆಟ್ಟಿ ಮಾತನಾಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅತಿ ಹೆಚ್ಚು ಗ್ರಾಹಕ ದೂರುಗಳನ್ನು ವಿಚಾರಣೆ ಮಾಡಿ ವಿಲೇವಾರಿ ಮಾಡಿದೆ. ಆಯೋಗದ ತೀರ್ಪುಗಳಿಂದ ಸಮಾಜದಲ್ಲಿ ಜಾಗೃತಿ ಉಂಟಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹುಬ್ಬಳ್ಳಿ ತಾಲೂಕಿನ ಸಹಾಯಕ ನಿರ್ದೇಶಕಿ ವಸುಂಧರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಪ್ರಭು ಹಿರೇಮಠ, ಕೆಪಿಇ ಸೊಸೈಟಿ ಕಾರ್ಯದರ್ಶಿ ಬಿ.ವಿ. ಸೋಮಾಪುರ, ಎಚ್‌ಪಿಸಿ ಕಂಪನಿಯ ಅಽಕಾರಿ ಸರೋಜಕುಮಾರ ಬೆಹೆರಾ, ಬಿಪಿಸಿ ಕಂಪನಿ ಅಽಕಾರಿ ಶಿವಕುಮಾರ, ಐಒಸಿ ಕಂಪನಿ ಅಽಕಾರಿ ಸಂಜೀವಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕ ಶಿವಶಂಕರ ಹಿರೇಮಠ, ಆಹಾರ ನಿರೀಕ್ಷಕರು ಇದ್ದರು.
ಆಹಾರ ಅಪವ್ಯಯ ತಡೆ ಕುರಿತು ಆಹಾರ ತಜ್ಞ ಬಸವರಾಜ ಬಿಳಿಅಂಗಡಿ ಪ್ರಾತ್ಯಕ್ಷಿಕೆ ನೀಡಿದರು.