ದೇಶದ ಅಖಂಡತೆ ಉಳಿವಿಗೆ ಬುನಾದಿ : ವಕೀಲ ವಿ.ಸತೀಶ್ ಕಾಮತ್ ಮಾಹಿತಿ

New Project (30)
Published on

ಮೂಲ್ಕಿ: ಪ್ರಜೆಗಳ ರಕ್ಷಣೆ, ದೇಶದ ಅಖಂಡತೆಯನ್ನು ಉಳಿಸಿ ಬೆಳೆಸುವಲ್ಲಿ ಭಾರತದ ಸಂವಿಧಾನ ಉನ್ನತ ಬುನಾದಿಯನ್ನು ಹೊಂದಿದ್ದು, ಎಲ್ಲರೂ ಸಂವಿಧಾನದ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಬೇಕು ಎಂದು ವಕೀಲ ವಿ.ಸತೀಶ್ ಕಾಮತ್ ಹೇಳಿದರು.

ಮೂಲ್ಕಿ ವಿಜಯ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸಂವಿಧಾನ ದಿನ ಆಚರಣೆ ಸಂದರ್ಭ ಸಂವಿಂಧಾನದ ಆಶಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿ ಸಂವಿಧಾನದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಪ್ರತಿಜ್ಞಾವಿಧಿ ಬೋಧಿಸಿದರು. ವಾಣಿಜ್ಯ ಶಾಸ್ತ್ರ ಮುಖ್ಯಸ್ಥೆ ಶರ್ಮಿಳಾ ರಾಜೇಶ್ ಉಪಸ್ಥಿತರಿದ್ದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಧೃತಿ ಸ್ವಾಗತಿಸಿದರು. ಅದಿತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net