ರಾಷ್ಟ್ರೀಯ ಬಸವಚೇತನ ಪ್ರಶಸ್ತಿ ಪ್ರದಾನ

4 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಸವ ಜಯಂತಿ ನಿಮಿತ್ತ ಚೇತನ ಫೌಂಡೇಶನ್​ ಹಾಗೂ ಶ್ರೇಯಾ ಜನಸೇವಾ ಫೌಂಡೇಶನ್​ ಸಹಯೋಗದಲ್ಲಿ ಚಿಂತನ ಪ್ರಭ ಕೃತಿ ಲೋಕಾರ್ಪಣೆ, ಬಸವ ಧರ್ಮ ಮಾಸಪತ್ರಿಕೆ ಅನಾವರಣ, ವಚನ ಗಾಯನ, ವಿವಿಧ ಕ್ಷೇತ್ರದ ಸಾಧಕರಿಗೆ ರಾಷ್ಟ್ರೀಯ ಬಸವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕಸಾಪ ಸಾಹಿತ್ಯ ಭವನದಲ್ಲಿ ಸಂಜೆ ಜರುಗಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀರಭದ್ರಪ್ಪ ಜಾಕೋಜಿ, ಪುಷ್ಪಾವತಿ ಬಿಸನಳ್ಳಿ, ಶಿವಮೂರ್ತೆಪ್ಪ ಬುದ್ನಿ, ಕೆ.ಸಿ.ಪಟ್ಟಣಶೆಟ್ಟಿ, ಎಚ್​.ಈಶ್ವರಪ್ಪ, ಪುಟ್ಟರಾಜ ಹಿರೇಮಠ, ಮಾರುತಿ ಬೀಳಗಿ, ಡಾ. ಪ್ರೀತಿ ಕಾಳೆ, ಈರಪ್ಪ ಕರನಂದಪ್ಪ ಎಮ್ಮಿ, ಶಶಿಧರ ಉಜ್ಜನಿ, ಶೋಭಾ ಎಂ.ಜಾಬಿನ್​, ಡಾ.ರತ್ನಾ ಐರಸಂಗ, ಐ.ಡಿ.ಇಂಡಿಕರ, ವೀರೇಶ ಕುಬಸದ, ಶಿವಮ್ಮ ಡಂಗಿ, ಯಲ್ಲಪ್ಪ ಪರಸಪ್ಪನವರ, ಜೆಡಪ್ಪ ಬಿ.ಕೆ., ಕುಸುಮರಾಣಿ ಬಿಳೇಕುದರಿ, ಡಾ. ಶಾಂತಪ್ಪ ಭಜಂತ್ರಿ, ಪ್ರವಿಳಾ ವಾರದ, ಪೂಜಾ ವಣಗೇರಿ, ಡಾ.ಪ್ರಸನ್ನ ನಾಡಿಗೇರ, ಕಲ್ಪನಾ ಪಾಟೀಲ, ಮನುಕುಮಾರ ಹಿರೇಮಠ, ಡಿ.ಸಿ.ಬಸವರಾಜಪ್ಪ ಅವರಿಗೆ ರಾಷ್ಟ್ರೀಯ ಬಸವಚೇತನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಯಮಿ ಡಾ. ರಮೇಶ ಮಹದೇವಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೇಯಾ ಜನಸೇವಾ ಫೌಂಡೇಶನ್​ ರಾಜ್ಯಾಧ್ಯಕ್ಷ ವಿ.ಜಿ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಸಾಹಿತಿ ಸುರೇಶ ಕೋರಕೊಪ್ಪ ಕೃತಿ ಅನಾವರಣಗೊಳಿಸಿದರು. ಪಂಡಿತ ಅವಜಿ ಉಪನ್ಯಾಸ ನೀಡಿದರು. ಚೇತನ ಫೌಂಡೇಶನ್​ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಅಧ್ಯಕ್ಷತೆ ವಹಿಸಿದ್ದರು.

ಎಲ್​.ಐ.ಲಕ್ಕಮ್ಮನವರ, ಉಮಾದೇವಿ ಹಿರೇಮಠ, ಮೃತ್ಯುಂಜಯ ವಸ್ತ್ರದ, ಭಾಗ್ಯಶ್ರೀ ರಜಪೂತ, ಸಂಗೀತಾ ಮಠಪತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net