

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ೨೨ ರಿಂದ ೪೫ ವಯಸ್ಸಿನ ಮಹಿಳೆಯರ ಯೋಗ ಕ್ಷೇಮದಲ್ಲಿ ಆಯುರ್ವೇದ ಪಾತ್ರ ಕಾರ್ಯಕ್ರಮ ಮೂರ್ನಾಡು ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಎಚ್.ಆರ್.ಸರಸ್ವತಿ, ಡಾಕ್ಟರ್ ಎಸ್.ಎನ್.ಬೃಂದಾ ಅವರು ಮುಟ್ಟಿನ ಸಮಸ್ಯೆ, ಗರ್ಭಿಣಿಯರಲ್ಲಿ ಸಮಸ್ಯೆ, ರಕ್ತ ಹೀನತೆ, ರಕ್ತದೊತ್ತಡ, ಮಧುಮೇಹ, ಸಂದೀ ಶೂಲ, ಗ್ಯಾಸ್ಟ್ರಿಕ್, ಸಂತಾನೋತ್ಪತ್ತಿ ಸಮಸ್ಯೆಗಳು, ಥೈರಾಯ್ಡ, ಆಯುರ್ವೇದ ಪಂಚಕರ್ಮ ಚಿಕಿತ್ಸೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಮನೆ ಮದ್ದಿನ ಬಗ್ಗೆ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್ ಮಾತನಾಡಿ, ಆಯುರ್ವೇದದ ಸದುಪಯೋಗ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕಾಗಿ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಆಯುಷ್ ಆರೋಗ್ಯ ಕೈಪಿಡಿಗಳನ್ನು, ಬಜೆ ಗಿಡಗಳನ್ನು ವಿತರಣೆ ಮಾಡಲಾಯಿತು.