ಸಂಧ್ಯಾ ಕುಲಕರ್ಣಿಗೆ ರಾಷ್ಟ್ರೀಯ ಪ್ರಶಸ್ತಿ

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮಧುಮೇಹ ತಜ್ಞೆ ಡಾ. ಸಂಧ್ಯಾ ಕುಲಕರ್ಣಿ ಅವರಿಗೆ ಪ್ರತಿಷ್ಠಿತ ರಿಸರ್ಚ ಸೊಸೈಟಿ ಫಾರ್​ ದಿ ಸ್ಟಡಿ ಆಫ್​ ಡಯಾಬಿಟಿಸ್​ ಇನ್​ ಇಂಡಿಯಾ- ಯುನೈಟೆಡ್​ ಸ್ಟೇಟ್ಸ್​ ವೈಟಲ್ಸ್​ (ಆರ್​ಎಸ್​ಎಸ್​ಡಿಐ-ಯುಎಸ್​ವಿ) 2024 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ನ. 15ರಂದು ದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಏರ್ಪಡಿಸಿದ್ದ ಆರ್​ಎಸ್​ಎಸ್​ಡಿಐ ವಾರ್ಷಿಕ ಸಮ್ಮೇಳನದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರಸಿಂಗ್​ ಡಾ. ಸಂಧ್ಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮಧುಮೇಹ ತಡೆ ಮತ್ತು ಚಿಕಿತ್ಸೆ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ವೈದ್ಯರಿಗೆ ಈ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ದೇಶದ 28 ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ. ಸಂಧ್ಯಾ ಈ ವರ್ಷ ಪ್ರಶಸ್ತಿಗೆ ಪಾತ್ರರಾದ ಉತ್ತರ ಕರ್ನಾಟಕದ ಏಕೈಕ ವೈದ್ಯೆ.

ಡಾ. ಸಂಧ್ಯಾ ಧಾರವಾಡದಲ್ಲಿ ತಮ್ಮ ತೇಜಸ್​ ಚಾರಿಟೇಬಲ್​ ಟ್ರಸ್ಟ್​ ಮೂಲಕ ಅನೇಕ ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿದ್ದು, 25 ವರ್ಷಗಳಿಂದ ನಿರಂತರವಾಗಿ ಮಧುಮೇಹ ತಡೆ ಮತ್ತು ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಲು ಉಚಿತ ಶಿಬಿರಗಳನ್ನು ಏರ್ಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net