ನದೀಮ್​ ಸನದಿಗೆ ರಾಷ್ಟ್ರೀಯ ಪ್ರಶಸ್ತಿ

26 Jaggu 7 Nadeem Sanadi
Published on

ಬೆಳಗಾವಿ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಟಕ ಗದಗ ಕೊಡಮಾಡುವ ಯುವ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಇಲ್ಲಿನ ಯುವಕವಿ ನದೀಮ್​ ಸನದಿ ಭಾಜನರಾಗಿದ್ದಾರೆ.

ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಟಕದ ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿ ಚಿಂತಕರನ್ನೊಳಗೊಂಡ ಸಭೆಯು ನದೀಮ ಸನದಿ ಅವರನ್ನು ಯುವ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಜೂ.28 ಹಾಗೂ 29ರಂದು ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನದೀಮ್​ ಸನದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಸಾಪ ರಾಜ್ಯ ಟಕದ ಅಧ್ಯ ಡಾ.ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃತ್ತಿಯಿಂದ ಸಿವಿಲ್​ ಇಂಜಿನಿಯರ್​ ಆಗಿರುವ ನದೀಮ ಸನದಿ, ನಾಡಿನ ಉದಯೋನ್ಮುಖ ಕವಿಯಾಗಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಹುಲಿಯ ನೆತ್ತಿಗೆ ನೆರಳು ಹಾಗೂ ಪ್ರತಿರೋಧ ಮತ್ತು ಪ್ರಿಯತಮೆ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ಈ ಸಂಕಲನಗಳು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರ ಒಂದು ಕವನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಕಾಂ ಪಠ್ಯದಲ್ಲಿ ಸೇರ್ಪಡೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net