

ಸೋಮವಾರಪೇಟೆ: ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದಲ್ಲಿ ಶನಿವಾರಸಂತೆ ನಿವಾಸಿ ಲಾವಣ್ಯ ಮೋಹನ್ ಅವರಿಗೆ ಕಾವ್ಯ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿವೃತ್ತ ಲೋಕಾಯುಕ್ತ ಡಾ.ಎನ್.ಸಂತೋಷ ಹೆಗ್ಡೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಜಿ.ನಂಜಯ್ಯನಮಠ, ಪ್ರತಿಷ್ಠಾನದ ರಾಷ್ಟ್ರಾಧ್ಯಕ್ಷ ರಮೇಶ್ ಸುರ್ವೆ, ಸಮ್ಮೇಳನಾಧ್ಯಕ್ಷರ ಡಾ.ಸಿ.ಸೋಮಶೇಖರ್ ಮತ್ತಿತರರು ಇದ್ದರು. ಲಾವಣ್ಯ ಮೋಹನ್ ಅವರು 300 ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿರುತ್ತಾರೆ. ಇಲ್ಲಿಯವರೆಗೆ 3 ಪುಸ್ತಕಗಳು ಲೋಕಾರ್ಪಣೆಗೊಂಡಿವೆ. ಇವರ ಪುಷ್ಕರಣಿ (ಕವನ ಸಂಕಲನ) ಹಾಗೂ ಛಾಯಾ (ಕಾದಂಬರಿ) ಮುದ್ರಣ ಹಂತದಲ್ಲಿವೆ.