ಕೃಷಿಕ ರವಿಶಂಕರ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ

11 gkp.01
ದೆಹಲಿಯಲ್ಲಿ ಮಹೇಂದ್ರ ಟ್ರ್ಯಾಕ್ಟರ್ಸ್ ಅವರ ರಾಷ್ಟ್ರೀಯ ಕೃಷಿ ಜಾಗರಣ ಮಿಲಿಯನರ್ ಫಾರ್ಮರ್ ಪ್ರಶಸ್ತಿಯನ್ನು ಸಂಸ್ಥೆಯ ಮುಖ್ಯಸ್ಥರಿಂದ ರವಿಶಂಕರ್ ಬಾರಿತ್ತಾಯ ಸ್ವೀಕರಿಸಿದರು.
Published on

ಗೋಣಿಕೊಪ್ಪ: ನವದೆಹಲಿಯಲ್ಲಿ ಮಹೇಂದ್ರ ಟ್ರ್ಯಾಕ್ಟರ್ಸ್ ಅವರ ರಾಷ್ಟ್ರೀಯ ಕೃಷಿ ಜಾಗರಣ ಮಿಲಿಯನರ್ ಫಾರ್ಮರ್ ಪ್ರಶಸ್ತಿಯನ್ನು ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದ ರವಿಶಂಕರ್ ಬಾರಿತ್ತಾಯ ಅವರು ಭಾನುವಾರ ಸಂಸ್ಥೆಯ ಮುಖ್ಯಸ್ಥರಿಂದ ಸ್ವೀಕರಿಸಿದರು.

ಈಗಾಗಲೇ ಕೃಷಿಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಳಿಸಿರುವ ರವಿಶಂಕರ್ ಬಾರಿತ್ತಾಯ ಅವರಿಗೆ ಈಗ ರಾಷ್ಟ್ರ ಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೊಡಗಿನ ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರವನ್ನು ಮಾಡಿರುವ ರವಿಶಂಕರ್ ಅವರ ಜಮೀನಿಗೆ, ಇತ್ತೀಚಿಗೆ ರಾಜ್ಯ ಕೃಷಿ ಸಚಿವರು ಭೇಟಿ ನೀಡಿದ್ದರು. ಇವರು 35ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಕೊಡಗಿನಲ್ಲಿ ನಶಿಸುತ್ತಿರುವ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ. ಪಶು ಸಂಗೋಪನೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಪದ್ಮನಾಭರಾವ್ ಅವರ ಪುತ್ರ. ಇವರ ಸಹೋದರ ಜೈ ಶಂಕರ್ ಕೂಡ ಇವರೊಂದಿಗೆ ಕೈಜೋಡಿಸಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net