ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

dvg masters games jan 24
Published on

ದಾವಣಗೆರೆ: ದಾವಣಗೆರೆಯ ಹಿರಿಯ ಅಥ್ಲೆಟಿಕ್ ಕ್ರೀಡಾಪಟುಗಳಾದ ಪಿ. ನಾಗರಾಜಪ್ಪ, ಲಕ್ಷ್ಮಣರಾವ್ ಸಾಳಂಕಿ ಹಾಗೂ ಮಹಮ್ಮದ್ ರಫಿ ಫೆಬ್ರವರಿಯಲ್ಲಿ ಉತ್ತರಪ್ರದೇಶದ ವಾರಣಸಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್‌ನ ನಾಲ್ಕನೇ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದ ಅಥ್ಲೆಟಿಕ್ ವಿಭಾಗದಲ್ಲಿ ವಿವಿಧ ಬಹುಮಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಪಿ.ನಾಗರಾಜಪ್ಪ 75 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 5 ಕಿ.ಮೀ. ಓಟದಲ್ಲಿ ಬೆಳ್ಳಿ, 800 ಮೀ. ಹಾಗೂ 1.5 ಕಿ.ಮೀ. ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಲಕ್ಷ್ಮಣರಾವ್ ಸಾಳಂಕಿ 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 10 ಕಿಮೀ ಓಟದಲ್ಲಿ ಬೆಳ್ಳಿ, 800 ಮೀ. ಓಟದಲ್ಲಿ ಚಿನ್ನ, 5 ಕಿಮೀ ಓಟದಲ್ಲಿ ಕಂಚಿನ ಪದಕ ಪಡೆದರು. ಬಿಎಸ್‌ಎಫ್‌ನ ಮಾಜಿ ಯೋಧ ಮಹ್ಮದ್ ರಫಿ, 10 ಕಿಮೀ, 800 ಮೀ. ಓಟದಲ್ಲಿ ಕಂಚು, 4-100 ರಿಲೇನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net