

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ರಾಷ್ಟ್ರೀಯ ವಾಸ್ತುಶಿಲ್ಪದ ಯೋಗ್ಯತಾ ಪರೀಕ್ಷೆ (ನಾಟಾ) ಗಾಗಿ ಅರಿವು ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮವು ಪ್ರಸ್ತುತ ಪಿಯುಸಿ ವಿಜ್ಞಾನದ ಎರಡನೇ ವರ್ಷದಲ್ಲಿ ಓದುತ್ತಿರುವ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡಿದೆ. ಕಾರ್ಯಕ್ರಮವು ಜೂನ್ 30 ರಿಂದ ಜುಲೈ 3 ರವರೆಗೆ ಮಹಾವಿದ್ಯಾಲಯದ ಆರ್ಕಿಟೆಕ್ಚರ್ ವಿಭಾಗದಲ್ಲಿ ನಡೆಯಲಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ವಿ.ಜಿ. ಸಂಗಮ್ ಮತ್ತು ಪ್ರೊ. ಸತೀಶ ನಡುವಿನಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.