ದೇಶ ದ್ರೋಹಿಗಳನ್ನು ಗಡಿಪಾರು ಮಾಡಿ; ಶ್ರೀರಾಮ ಸೇನೆ ಹಟ್ಟಿ ತಾಲೂಕು ಘಟಕ ಒತ್ತಾಯ

240220 Hutti Sriram Sena Protest
Published on

ಹಟ್ಟಿಚಿನ್ನದಗಣಿ: ಇಸ್ಲಾಮಿಕ್ ಮೂಲಭೂತವಾದಿಗಳು, ನಕ್ಸಲರು, ಪ್ರತ್ಯೇಕತಾವಾದಿಗಳಿಂದ ಪ್ರೇರಿತರಾಗಿ ದೇಶ್ರದ್ರೋಹಿ ಹೇಳಿಕೆ ನೀಡಿದ ಅಮೂಲ್ಯ ಲಿಯೋನಾ ಹಾಗೂ ಆರ್ದ್ರಾರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಶ್ರೀ ರಾಮಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ರಘುಗೌಡ ನಾಯಕ ಮಾತನಾಡಿ, ಪ್ರತ್ಯೇಕತಾವಾದಿಗಳು, ಇಸ್ಲಾಮಿಕ್ ಮೂಲಭೂತವಾದಿಗಳು, ಕಮ್ಯೂನಿಷ್ಟ್ ಪಕ್ಷಗಳು ಒಟ್ಟಾಗಿ ದೇಶ ವಿಭಜಸಿಲು ಹುನ್ನಾರ ನಡೆಸಿವೆ. ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನೆಪದಲ್ಲಿ ವಿರೋಧಿ ದೇಶವನ್ನು ಹೊಗಳಿ ದೇಶಕ್ಕೆ ಅವಮಾನ ಮಾಡಿದ ಕ್ರಿಮಿಗಳಿಗೆ ದೇಶದಲ್ಲಿ ವಾಸವಾಗಿರಲು ಯಾವುದೆ ಯೋಗ್ಯತೆ ಇಲ್ಲ. ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಬಿಜೆಪಿ ಹಿರಿಯ ಮುಖಂಡ ಬಾಲಪ್ಪ ನಾಯಕ, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಅಂಬಿಗೇರ, ಬಿಎಂಎಸ್‌ನ ಅಂಬಣ್ಣನಾಯಕ, ದೇವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net