ರಾಷ್ಟ್ರ ಮಟ್ಟದ ಜಂಪ್ ರೋಪ್‌ನಲ್ಲಿ ಸಾಧನೆ

15 HANUMSAGARA 041
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಜರುಗಿದ 21ನೇ ಜೂನಿಯರ್ ಹಾಗೂ ಸೀನಿಯರ್ ಓಪನ್ ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್‌ಶಿಪ್‌ನಲ್ಲಿ ಹನುಮಸಾಗರದ ಜಂಪ್ ರೋಪ್ ಕ್ರೀಡಾಪಟುಗಳು ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದ ತಂಡದೊಂದಿಗೆ ರಾಜ್ಯ ಜಂಪ್ ರೋಪ್ ಸಂಸ್ಥೆ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ರಜಾಕ್ ಟೈಲರ್, ಕೋಚ್ ವಸಂತಕುಮಾರ, ತಂಡದ ಮ್ಯಾನೇಜರ್ ಶಿವಪ್ಪ, ನಿರ್ಣಾಯಕ ರವಿಕುಮಾರ ಇದ್ದಾರೆ.
Published on

ಹನುಮಸಾಗರ: ಪಟ್ಟಣದ ಜಂಪ್ ರೋಪ್ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದ ಜಂಪ್ ರೋಪ್ ಕ್ರೀಡಾ ಕೂಟದಲ್ಲಿ ವಿವಿಧ ಪದಕ ಗೆದ್ದು ವಿಜಯದ ನಗೆ ಬಿರಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸೆ.12 ರಿಂದ 14 ರವರೆಗೆ ಆಯೋಜಿಸಿದ್ದ ಜೂನಿಯರ್ ಹಾಗೂ ಸೀನಿಯರ್ ಓಪನ್ ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್‌ಶಿಪ್ ಜರುಗಿತು. ರಾಜ್ಯ ತಂಡ ಪ್ರತಿನಿಧಿಸುತ್ತಿದ್ದ 15 ಕ್ರೀಡಾಪಟುಗಳು 6 ಬಂಗಾರ, 10 ಬೆಳ್ಳಿ, 1 ಕಂಚು ಸೇರಿ ಒಟ್ಟು 17 ಪದಕ ಗೆದ್ದಿದ್ದಾರೆ. 14 ವರ್ಷ ಒಳಗಿನ ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇಯಲ್ಲಿ ಮಂಜುಳಾ, ಅನುಷಾ ಬಂಗಾರದ ಪದಕ, 20 ವರ್ಷದ ಒಳಗಿನ ಸಿಂಗಲ್ ರೋಪ್ ಸ್ಪೀಡ್ ರಿಲೇಯಲ್ಲಿ ಯಶೋದಾ, ಸಹನಾ, ಸುನೀತಾ, ಅನುಷಾ ಬೆಳ್ಳಿ ಪದಕ, ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇಯಲ್ಲಿ ಸಂಗೀತಾ, ಸೌಭಾಗ್ಯ ಬೆಳ್ಳಿ ಪದಕ, ಸಿಂಗಲ್ ರೋಪ್ ಡಬಲ್ ಅಂಡರ್ 30 ಸೆಕೆಂಡ್‌ನಲ್ಲಿ ಸೌಭಾಗ್ಯ ಕಂಚಿನ ಪದಕ, ಸಿಂಗಲ್ ರೋಪ್ 30 ಸೆಕೆಂಡ್ ಸ್ಪೀಡ್‌ನಲ್ಲಿ ಯಶೋದಾ ಬೆಳ್ಳಿ ಪದಕ, 20 ವರ್ಷ ಒಳಗಿನ ಡಬಲ್ ಡಚ್ ಸ್ಪೀಡ್ ಸ್ಪ್ರಿಂಟ್‌ನಲ್ಲಿ ಮಹಮ್ಮದ್ ಇರ್ಫಾನ್, ಮಹಾರಾಜ, ಕಿಶನ್ ಆರ್. ಪವಾರ ಬೆಳ್ಳಿ ಪದಕ, 20 ವರ್ಷ ಮೇಲ್ಪಟ್ಟ ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇ ಯಲ್ಲಿ ಮಹಾಂತೇಶ ಆರ್, ಮಂಜುನಾಥ ಬಂಗಾರದ ಪದಕ, ಸಿಂಗಲ್ ರೋಪ್ 30 ಸೆಕೆಂಡ್ ಸ್ಪೀಡ್‌ನಲ್ಲಿ ಮಂಜುನಾಥ ಬಂಗಾರದ ಪದಕ, ಸಿಂಗಲ್ ರೋಪ್ 3 ನಿಮಿಷ ಎಂಡೋರೆನ್ಸ್ನಲ್ಲಿ ಮಹಾಂತೇಶ ಆರ್. ಬಂಗಾರದ ಪದಕ ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net